ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ-ರಾಜಗೋಪಾಲ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎಂಬ ಗಾದೆಯಂತೆ ಹೆಣ್ಣು ಶಿಕ್ಷಣ ಪಡೆದು ಮೊದಲ ಸ್ಥಾನದಲ್ಲಿರಬೇಕು ಎಂದು ಸೌಭಾಗ್ಯ ಸೇವಾ ಟೆಸ್ಟ್ ಅಧ್ಯಕ್ಷ ರಾಜಗೋಪಾಲ್ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಅಂಬೇಡ್ಕರ್ ಭವನದಲ್ಲಿ ಡೆಬೋರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ತನ್ನನ್ನು ತಾನು ತೊಡಗಿಸಿಕೊಂಡು ಸ್ವಾವಲಂಬಿಯಾಗಬೇಕು. ಆಗ ಮಾತ್ರ ಹೆಣ್ಣಿಗೆ ಸ್ಥಾನ-ಮಾನ ಉಳಿಯುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು ಎಂದು ಹೇಳಿದ್ದರು ಎಂದರು.

ಡೆಬೋರ್ ಫೌಂಡೇಷನ್ ಟ್ರಸ್ಟ್ ವತಿಯಿಂದ 6 ತಿಂಗಳು ತರಬೇತಿ ಪಡೆದ ಮಹಿಳೆಯರಿಗೆ ಉಚಿತವಾಗಿ 14 ಹೊಲಿಗೆ ಯಂತ್ರಗಳನ್ನು ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿ ಲಕ್ಷ್ಮಮ್ಮ ರಾಮಕೃಷ್ಣ ಮಾತನಾಡಿ ಉಚಿತ ಹೊಲಿಗೆ ಯಂತ್ರ ತರಬೇತಿಗಳನ್ನು ಪಡೆಯುತ್ತಿರುವ ಮಹಿಳೆಯರಿಗೆ ಗ್ರಾಮ ಪಂಚಾಯತಿ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದೇವೆ, ಹಾಗೂ ಮುಂದಿನ ಬ್ಯಾಚ್ ನಲ್ಲಿ ಕಲಿಯುತ್ತಿರುವ ಮಹಿಳೆಯರಿಗೆ ನಮ್ಮ ಪಂಚಾಯತಿ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.

 ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವರಲಕ್ಷ್ಮಿ ಕೃಷ್ಣಮೂರ್ತಿ, ಸದಸ್ಯ ಟಿ. ವಿ. ವೆಂಕಟೇಶ್, ಮಾನೇಜಿಂಗ್ ಟ್ರೆಸ್ಟ್ ಗೌರವಾನ್ವಿತ ಅಧ್ಯಕ್ಷ ತುಮಾಸ್ ರಾಜಕುಮಾರ್,ಸಂಯೋಜಕ ಲಾರೆನ್ಸ್,ಡೆಬೋರ್ ಫೌಂಡೇಷನ್ ಟ್ರಸ್ಟ್ ಸಿಬಂದಿ ವರ್ಗದವರು ಹಾಗು ಗ್ರಾಮ ಪಂಚಾಯಿತಿ ಅಬಿವೃದ್ದಿ ಅಧಿಕಾರಿ ವೆಂಕಟೇಶ್ ಹಾಜರಿದ್ದರು.

 

Share This Article
error: Content is protected !!
";