ರಾಜಣ್ಣ ವಜಾ ಖಂಡಿಸಿ ಅರೆಬೆತ್ತಲೆ ಉರುಳು ಸೇವೆ ಮಾಡಿದ ಅಭಿಮಾನಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಜಿಲ್ಲೆಯ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದಲ್ಲದೆ ಬೆಂಬಲಿಗನೊಬ್ಬ ಅರೆಬೆತ್ತಲೆ ಉರುಳು ಸೇವೆ ಮಾಡಿ ಗಮನ ಸೆಳೆದರು.

ಹೈಕಮಾಂಡ್ ಆದೇಶದ ಮೇರೆಗೆ ಕೆ.ಎನ್​ ರಾಜಣ್ಣ ಅವರನ್ನು ಸಿಎಂ ಸಿದ್ದರಾಮಯ್ಯ ವಜಾ ಮಾಡಿದ್ದಾರೆ. ಈ ಕುರಿತು ರಾಜಭವನವೂ ಆದೇಶ ಹೊರಡಿಸಿದೆ. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

- Advertisement - 

ನಗರದ ಎಂಜಿ ರಸ್ತೆಯಲ್ಲಿ ಸೇರಿದ್ದ ಸಾವಿರಾರು ಜನರು ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮಾರ್ಗದಲ್ಲಿದ್ದ ಎಲ್ಲ ಅಂಗಡಿ – ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿದ್ದವು. ಈ ಮೂಲಕ ವ್ಯಾಪಾರಿಗಳು ಪ್ರತಿಭಟನೆಗೆ ಪರೋಕ್ಷ ಬೆಂಬಲ ನೀಡಿದ್ದರು. ಪ್ರತಿಭಟನೆ ಹಿನ್ನೆಲೆ ಈ ಭಾಗದಲ್ಲಿ ಕೆಲಕಾಲ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅರೆಬೆತ್ತಲೆ ಉರುಳು ಸೇವೆ: ಮಾಜಿ ಸಚಿವ ರಾಜಣ್ಣ ಅವರ ಬೆಂಬಲಿಗನೊಬ್ಬ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿದರು. ರಾಜಣ್ಣ ಅವರ ಭಾವಚಿತ್ರ ಹಿಡಿದಿದ್ದ ಆತ, ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಘೋಷಣೆ ಕೂಗುತ್ತಾ ಉರುಳು ಮಾಡಿದರು.

- Advertisement - 

ಮಾಜಿ ಸಚಿವ ರಾಜಣ್ಣ ಬೆಂಬಲಿಗರು ಮಧುಗಿರಿ, ಕೊರಟಗೆರೆ, ತುಮಕೂರು, ಪಾವಗಡ ಸೇರಿದಂತೆ ಜಿಲ್ಲೆಯ 10 ತಾಲೂಕುಗಳಿಂದ ಆಗಮಿಸಿದ್ದರು. 60 ಬಸ್​​ಗಳಲ್ಲಿ ಆಗಮಿಸಿದ್ದ ರಾಜಣ್ಣ ಅವರ ಅಭಿಮಾನಿಗಳು ನಗರದ ಟೌನ್ ಹಾಲ್​ ಸರ್ಕಲ್​​ನಿಂದ ಬಿ.ಎಚ್. ರಸ್ತೆ, ಎಂಜಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿದರು.
ಸಾವಿರಾರು ಮಂದಿ ರಾಜಣ್ಣ ಅವರ ಭಾವ ಚಿತ್ರದ ಕಟೌಟ್
, ಪೋಸ್ಟರ್ ಹಿಡಿದು ಘೋಷಣೆ ಕೂಗುತ್ತಾ ಮಾಜಿ ಸಚಿವರಿಗೆ ಬೆಂಬಲ ಘೋಷಿಸಿದರು.

 

Share This Article
error: Content is protected !!
";