ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜಘಟ್ಟ ಆಂಜಿನೇಯ ಸ್ವಾಮಿ ದೇವಾಲಯದಲ್ಲಿ ಶ್ರೀರಾಮಾಂಜನೇಯ ರಥೋತ್ಸವ ಹಾಗು ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಮುಂಜಾನೆಯಿಂದಲೇ ಆಂಜನೇಯಸ್ವಾಮಿ ಹಾಗೂ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಮೂರ್ತಿಗೆ ಅಭಿಷೇಕ, ಕಲ್ಯಾಣೋತ್ಸವ, ವಿಶೇಷ ಅಲಂಕಾರ ಸೇರಿದಂತೆ ಹಲವು ರೀತಿಯ ಪೂಜಾ ಕಾರ್ಯಕ್ರಮಗಳು ನಡೆದವು.
ರಥೋತ್ಸವಕ್ಕೆ ಬಂದ ಭಕ್ತರು ರಥಕ್ಕೆ ಹಣ್ಣು ಧವನ ಆರ್ಪಿಸಿ ಧನ್ಯತೆ ಮೆರೆದರು. ರಾಜಘಟ್ಟ, ತೊಗರಿಘಟ್ಟ ಗ್ರಾಮಸ್ಥರಿಂದ ಹೂವಿನ ಅಲಂಕಾರ, ರಥೋತ್ಸವಗಳ ಸೇವೆ ನಡೆಯಿತು.
ಜಾತ್ರೆಯ ಅಂಗವಾಗಿ ವಿವಿಧ ಬಗೆಯ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದವು. ವಿವಿಧ ಸೇವಾ ಸಮಿತಿಗಳಿಂದ ಅರವಂಟಿಗೆ ಸೇವಾ ಕಾರ್, ಅನ್ನ ಸಂತರ್ಪಣೆ ಕಾರ್ಯಕ್ರಮ, ಆಂಜನೇಯಸ್ವಾಮಿಗೆ ರಾಜಘಟ್ಟ ಗ್ರಾಮಸ್ಥರಿಂದ ಹೂವಿನ ಆರತಿಗಳ ಸೇವೆಗಳು ನಿರಂತರ ವಾಗಿ ನಡೆದವು.
ಜಾತ್ರಾ ಮಹೋತ್ಸವದ ಅಂಗವಾಗಿ ಏ.8ರಂದು ಕ್ಷೀರಾಭಿಷೇಕ, ಊರಿನ ಗ್ರಾಮ ದೇವರುಗಳಿಗೆ ಆರತಿಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಹಾಗೂ ತಾಲ್ಲೂಕಿನ ಕಲಾವಿದರಿಂದ ವಿವಿದ ರೀತಿಯ ನಾಟಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಅಭಿವೃದ್ದಿ ಮಂಡಲಿ ಸದಸ್ಯರು ತಿಳಿಸಿದ್ದಾರೆ.

