ರಾಜೀವ್ ಗಾಂಧಿಯವರು ನನಗೆ ರಾಜಕೀಯದಲ್ಲಿ ಆದರ್ಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ದಿ.ರಾಜೀವ್ ಗಾಂಧಿಯವರು ರಾಜಕೀಯದಲ್ಲಿ ನನಗೆ ಆದರ್ಶ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಮರಿಸಿದರು.

- Advertisement - 

ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ನಿಮಿತ್ತ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಾರ್ಪಣೆ ಮಾಡಿ ಅವರು ಮಾತನಾಡಿದರು.
ಈ ಹಿಂದೆ ರಾಮನಗರಕ್ಕೆ ರಾಜೀವ್ ಗಾಂಧಿ ಅವರು ಯುವ ಕಾಂಗ್ರೆಸ್ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು.

- Advertisement - 

ನಾನು ಆ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ್ದೆ. ಕಾರ್ಯಕ್ರಮದ ಬಳಿಕ ಕಾರಿನಲ್ಲಿ ನನ್ನನ್ನು ಅವರು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದವರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ನಮ್ಮ ನಡುವೆ ಅನೇಕ ಚರ್ಚೆಗಳು ನಡೆದಿತ್ತು. ಅವರೊಂದಿಗಿನ ಈ ಭೇಟಿ ನನ್ನ ಸ್ಮೃತಿ ಪಟಲದಲ್ಲಿ ಇನ್ನೂ ಹಾಗೇ ಉಳಿದಿದೆ ಎಂದು ಡಿಸಿಎಂ ಶಿವಕುಮಾರ್ ಭಾವುಕರಾದರು.

ಅವರೇ ನನಗೆ ರಾಜಕೀಯದಲ್ಲಿ ಆದರ್ಶ. ಅವರು ಕೈಗೊಂಡ ಕಾರ್ಯಕ್ರಮಗಳು, ಎಲ್ಲಾ ಸಮುದಾಯಕ್ಕೆ ಕಲ್ಪಿಸಿದ ಅವಕಾಶಗಳಿಂದಾಗಿ ನಾವೆಲ್ಲರೂ ಈಗ ಮಂತ್ರಿಯಾಗಲು ಸಾಧ್ಯವಾಗಿದೆ. ಮಹಿಳೆಯರು ಇಂದು ರಾಜಕಾರಣದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿಕೊಟ್ಟ ರಾಜೀವ್‌ಗಾಂಧಿ ಅವರೇ ಕಾರಣ.

- Advertisement - 

ಪಂಚಾಯತರಾಜ್, ನವೋದಯ ಶಾಲೆಗಳು, ಕಂಪ್ಯೂಟರ್ ಕ್ರಾಂತಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನವ ಭಾರತದ ನಿರ್ಮಾಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ. ನಾವೆಲ್ಲರೂ ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಸಾಗೋಣ ಎಂದು ಡಿಸಿಎಂ ಶಿವಕುಮಾರ್ ಕರೆ ನೀಡಿದರು.

 

Share This Article
error: Content is protected !!
";