ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಮಿಳುನಾಡಿನ ಪೆರಂಬದೂರಿನಿಂದ ನವದೆಹಲಿಗೆ ಹೊರಟಿರುವ ರಾಜೀವ್‌ಗಾಂಧಿರವರ ಸದ್ಬಾವನಾ ಜ್ಯೋತಿಯಾತ್ರೆ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ರ್ ಜ್ಯೋತಿಯಾತ್ರೆಯನ್ನು ಬರಮಾಡಿಕೊಂಡು ಮಾತನಾಡಿ ತಮಿಳುನಾಡಿನ ಪೆರಂಬದೂರಿನಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ್‌ಗಾಂಧಿರವರ ಸ್ಮರಣೆಗಾಗಿ ದೊರೈ ಮತ್ತು ಶ್ರೀನಿವಾಸ್‌ರವರ ಮುಂದಾಳತ್ವದಲ್ಲಿ ಹೊರಟಿರುವ ಸದ್ಬಾವನಾ ಜ್ಯೋತಿ ಯಾತ್ರೆ ರಾಯಚೂರು ಮಾರ್ಗವಾಗಿ ಇದೆ ತಿಂಗಳು ೧೯ ಇಲ್ಲವೇ ೨೦ ರಂದು ನವದೆಹಲಿ ತಲುಪಲಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎ.ಸಾಧಿಕ್‌ವುಲ್ಲಾ, ಹಿಂದುಳಿದ ವರ್ಗಗಳ ವಿಭಾಗದ ಅಧ್ಕಕ್ಷ ಎನ್.ಡಿ.ಕುಮಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್,
ಜಿ.ವಿ.ಮಧುಗೌಡ, ಸೈಯದ್‌ವಲಿಖಾದ್ರಿ, ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಎ.ಜಾಕಿರ್‌ಹುಸೇನ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

