ವಿಶ್ವವಿದ್ಯಾನಿಲಯದಲ್ಲಿ ರಾಜ್ಯೋತ್ಸವ ಸಮಾರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನ ಆವರಣದ ಗಡಿಯಾರ ಗೋಪುರದಲ್ಲಿ ಕುಲಪತಿಗಳಾದ ಪ್ರೊ..ಲಿಂಗರಾಜ ಗಾಂಧಿಯವರು ಧ್ವಜಾರೋಹಣ ನೆರವೇರಿಸಿ 69ನೇ  ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.
ತದನಂತರ ರಾಜಾಜಿ ಹಾಲ್ನಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ಪ್ರಥಮ ರಾಜ್ಯೋತ್ಸವ ಆಚರಣೆ ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿಯೇ ನಡೆದಿದ್ದನ್ನು ಉಲ್ಲೇಖಿಸಿದರು. ವಿಶಾಲ ಮ್ಯೆಸೂರು ರಾಜ್ಯಕ್ಕೆ ಕರ್ನಾಟಕಎಂದು ನಾಮಕರಣವಾಗಿ ಐವತ್ತು ವರ್ಷ ತುಂಬಿದ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭ ವಿಶೇಷ ಮಹತ್ವ ತಂದಿದೆ ಎಂದು ಅವರು ನುಡಿದರು.

ರಾಷ್ಟ್ರಕವಿ ಕುವೆಂಪು, ಜಿ.ಪಿ. ರಾಜರತ್ನಂ, ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಮುಂತಾದ ಅನೇಕ ಮೇರು ಸಾಹಿತಿಗಳು ಕನ್ನಡದ ದೀವಿಗೆಯನ್ನು ಬೆಳಗಿದ ಹಾಗೂ ರಾಜಗೋಪಾಲಾಚಾರಿ, ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಖ್ಯಾತನಾಮರು ಕಲಿತ ಸೆಂಟ್ರಲ್ ಕಾಲೇಜು ಚಾರಿತ್ರಿಕ ಮಹತ್ವದ ವಿದ್ಯಾಮಂದಿರವಾಗಿದೆ ಎಂದು ಪ್ರೊ..ಗಾಂಧಿ ವಿವರಿಸಿದರು.

ಮೌಲ್ಯಮಾಪನ ಕುಲಸಚಿವರಾದ ಡಾ. ಸಿ.ಎಸ್. ಆನಂದ ಕುಮಾರ್, ಹಿರಿಯ ಪ್ರಾಧ್ಯಾಪಕರಾದ ಜ್ಯೋತಿ ವೆಂಕಟೇಶ್, ತಾಂಡವಗೌಡ, ರಮೇಶ್ ಕುಡೇನಟ್ಟಿ, ಶಿವಶಂಕರ್, ಎನ್.ಎಸ್.ಎಸ್. ಸಂಯೋಜಕರಾದ   ಡಾ. ಗೋವಿಂದೇಗೌಡ ಹಾಗೂ ಬೋಧಕಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರು (ಮೌಲ್ಯಮಾಪನ) ಡಾ. ಆನಂದ ಕುಮಾರ್, ಕಲಾ ನಿಕಾಯದ ಡೀನ್ ಡಾ. ಜ್ಯೋತಿ ವೆಂಕಟೇಶ್, ರಾಷ್ಟ್ರೀಯ ಹಬ್ಬದ ಸಂಚಾಲಕರಾದ ಪ್ರೊ.. ಶಿವಶಂಕರ್, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";