ರಾಮ..ರಘುರಾಮ..ಕೌಶಲ್ಯ ರಾಮ ದಶರಥ ರಾಮ ಭರತ ಭೂಮಿಯ ಉಸಿರು ರಾಮ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಭರತ ಭೂಮಿಯ
ಉಸಿರು
ಜನಿಸಿದನು
ರಾಮ
ನೇಮಿ ಕೌಶಲ್ಯರ
ಪ್ರಥಮನಾಗಿ
ಶುಕ್ಲ ಪಕ್ಷದ
ಚೈತ್ರದಂದು.

ಸದ್ದಿಲ್ಲದೆ ಹರಿಯುತ್ತಿತ್ತು
ಸರಯೂ ನದಿ
ರಾಮ ನಾಮ ಜಪಿಸುತ

ಸಂಭ್ರಮ ಸಢಗರವ
ಮನೆ ಮಾಡಿತ್ತು
ದಶದಿಕ್ಕುಗಳ ಸರದಾರ ದಶರಥನಿಗೆ ಜನಿಸಿದ್ದು
ಅಯೋಧ್ಯೆಯ ಉತ್ತರಾಧಿಕಾರಿಯೇ
ಎಂಬಂತೆ ನಗರ ನಿವಾಸಿಗಳು
ಪುಳಃಕಿತಗೊಂಡರು

ಪಟ್ಟದ ರಾಣಿ
ಕೋಸಲ ದೇಶದ
ರಾಜಕುಮಾರಿ
ಕೌಶಲ್ಯಳ ಗರ್ಭದಲಿ
ಜನಿಸಿದ ರಾಮನ ಸಂಭ್ರಮಾಚರಣೆ
ಕೇವಲ ಅಯೋಧೆಯೊಂದೇಯಲ್ಲ
ಕೋಸಲ ದೇಶವು
ಸಂಭ್ರಮಿಸಿತು

ತಳಮಳಿಸಿದಳು
ಕೈಕೆ, ಅಲವತ್ತುಕೊಂಡಳು
ಅಂದೇ ಮಂಥರೆಯೊಳು
ನಡೆದಿತ್ತು ಒಳಸಂಚು
ಜನಿಸಿದ ರಾಮನ
ಪಟ್ಟ ಬದಲಿಸುವ ತಂತ್ರ

ಬಾಲ್ಯದಲ್ಲೇ ರಾಮನಿಗೆ
ತೋರಿದಳು ಮಂಥರೆ
ರಾಮ ಬಯಸಿದ ಚಂದಿರನ ಭೂಮಿಯೊಳು
ಮಂಥರೆ ರಾಮಗೆ ಮಧುರಳಾದಳು
ಕಾದಳು ಮಂಥರೆ
ಕೈಕೆಯೊಳು ರೂಪಿಸುವ
ಸಂಚೋಳು

ಶತಮಾನಗಳೇ ಉರುಳಿದವು ಸಂವತರಗಳೇ ಕಳೆದವು
ರಾಮ ಜನಿಸಿದ್ದು ನೆನಪು
ಹಸಿರಸಿರು

ರಾಮ…ರಘುರಾಮ..
ಶ್ಕೌಶಲ್ಯ ರಾಮ
ದಶರಥ ರಾಮ
ಮಂಥರೆಯ ಮಧುರ ರಾಮ
ಭರತ ಭೂಮಿಯ ಉಸಿರು
ರಾಮ
(ಮಂಥರೆಯ ಮಧುರ ರಾಮ) (ಮಂಥರೆ ಸಂಚು ರೂಪಿಸದಿದ್ದರೆ ರಾಮನದೆಲ್ಲಿಯ ಖ್ಯಾತಿ)ರಚನೆ:ಗುರಾನಿ
ಜಿ ಆರ್ ನಿಂಗೋಜಿ ರಾವ್ ಗುಜ್ಜರ್ ದಾವಣಗೆರೆ 9036389240

 

 

Share This Article
error: Content is protected !!
";