ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕುಣಿಯಲಾರದವರು ನೆಲ ಡೊಂಕು ಎಂದರಂತೆ” ಸಚಿವ ರಾಮಲಿಂಗರೆಡ್ಡಿ ಅವರೇ, ಇದು ನಿಮಗೆ ಒಪ್ಪುವ ಮಾತು! ಮುಜರಾಯಿ ಇಲಾಖೆಯ ಯೋಗ್ಯತೆಯನ್ನು ಸ್ವತಃ ಕರಗ ಸಮಿತಿಯವರೇ ಬಿಚ್ಚಿಟ್ಟಿದ್ದಾರೆ. ಒಮ್ಮೆ ಕಿವಿಗೊಟ್ಟುಕೇಳಿ ಎಂದು ಜೆಡಿಎಸ್ ಸೂಚ್ಯವಾಗಿ ಹೇಳಿದೆ.
ಕರಗ ಉತ್ಸವಕ್ಕೆ ಶುಕ್ರವಾರವೇ ಹಣ ಬಿಡುಗಡೆ ಮಾಡಿದ್ದರೇ, ಕರಗ ಹೊರುವ ಅರ್ಚಕರು, ಸಮಿತಿಯವರು ಯಾಕೆ ತಮ್ಮ ಕೈಯಿಂದ ಸ್ವಂತ 60 ಲಕ್ಷ ರೂ. ಹಣ ಹಾಕಿ ಉತ್ಸವ ನಡೆಸುತ್ತಿದ್ದಾರೆ.? ಕರಗ ಉತ್ಸವಕ್ಕೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದರು? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಹಣ ಬಿಡುಗಡೆಗೂ ಪರ್ಸಂಟೇಜ್ ವ್ಯವಹಾರವೇ? ರಾಮಲಿಂಗರೆಡ್ಡಿ ಅವರೇ, ಸಾರಿಗೆ ಸಂಸ್ಥೆಯನ್ನು ನಿಶ್ಯಕ್ತಿಗೊಳಿಸಿರುವ ನೀವೂ ಸಹ ನಿಶ್ಯಕ್ತಿ ಗೊಂಡಂತಿದೆ. ಮೊದಲು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ “ಅಯೋಗ್ಯ” ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯೋಗ್ಯತೆ ದೇಶದ ಜನತೆ ಚೆನ್ನಾಗಿತಿಳಿದಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜ್ಯದಲ್ಲಿರುವ ಡಕೋಟಾ ಕಾಂಗ್ರೆಸ್ ಸರ್ಕಾರಕ್ಕೆ, ಬೆಲೆ ಏರಿಸಿರುವ ನಿಮ್ಮ ದುರಾಡಳಿತಕ್ಕೆ ಜನರೇ ಬೀದಿ ಬೀದಿಯಲ್ಲಿ ಛೀಮಾರಿ ಹಾಕಿ ಉಗಿಯುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.