ಕಲಾವಿದರ ಮಾಸಾಶನ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಮಾಂಜಿನಪ್ಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸರ್ಕಾರ ಜನಪದ ರಂಗಭೂಮಿ ಕಲಾವಿದರಿಗೆ
2500 ನೀಡುತ್ತಿರುವುದು ಸರಿಯಷ್ಟೆ ಅದರೆ  ಮಾಸಾಶನ ಪಡೆಯಲು ಆಗುತ್ತಿರುವ ವಿಳಂಬ ಈಗಾಗಲೇ ಪಡೆಯುತ್ತಿರುವ ಬೇರೆ ಮಾಸಾಶನ ನಿಲ್ಲಿಸಿ, ಕಲಾವಿದರ ಮಾಸಾಶನ ಪಡೆಯಲು ವರ್ಷಗಟ್ಟಲೇ ಕಾಯುವುದು ಮೊದಲಾದ ಅವ್ಯವಸ್ಥೆಗಳಿಂದಾಗಿ ಕಲಾವಿದರು ಮಾಸಾಶನ ದಿಂದ ವಂಚಿತ ರಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ ಆರೋಪಿಸಿದರು.

ನಗರದ ವಿನಾಯಕ ನಗರದಲ್ಲಿರುವ ತಾಲ್ಲೂಕು ಕಲಾವಿದ ಸಂಘದ ಭವನದಲ್ಲಿ  ಅ ಯೋಜನೆ ಮಾಡಲಾದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ಮಾಶಾಸನ ಕ್ಕಾಗಿ  58 ವರ್ಷ ತುಂಬಿದ ನಂತರ ಅರ್ಜಿ ಹಾಕಬೇಕು. ಮಾಸಾಶನ ಕ್ಕೆ ಅರ್ಜಿ ಹಾಕಿದ ಮೂರರಿಂದ ನಾಲ್ಕು, ವರ್ಷದ ನಂತರ ಮಂಜೂರು ಅಗುತ್ತಿದೆ ಅದರೆ  ಅರ್ಜಿ ಹಾಕುವಾಗಲೇ ಕಂದಾಯ ಇಲಾಖೆ ನೀಡುವ ವೃದ್ದಾಪ್ಯ ವೇತನ ಪಡೆಯಬಾರದೆಂದು  ಒಂದು ವೇಳೆ ಪಡೆಯುತ್ತಿದ್ದರೂ ಅದನ್ನು ನಿಲ್ಲಿಸಿ ಅರ್ಜಿ ಹಾಕಬೇಕೆ ಇಲ್ಲವಾದರೆ ಕಲಾವಿದರ ಮಾಸಾಶನ ಬರುವುದಿಲ್ಲ ಎನ್ನುತ್ತಾರೆ.

ಇತ್ತ ಕಲಾವಿದರ ಮಾಶಾಸನ ವೂ ಇಲ್ಲದೆ ವೃದ್ಧಾಪ್ಯ ವೇತನವೂ ಇಲ್ಲದೆ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ ಅರ್ಜಿ ಹಾಕಿದ ನಾಲ್ಕರಿಂದ ಐದು  ವರ್ಷಗಳು ಕಳೆದ ನಂತರ ಮಾಸಾಶನ ಮಂಜೂರಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಸಾಶನ ಮಂಜೂರು ಮಾಡಿದ ನಂತರ ವೃದ್ಧಾಪ್ಯ ವೇತನ ನಿಲ್ಲಿಸಿಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನಂತರ ಕಲಾವಿದರ ಸಂಘದ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ  ಕಲಾವಿದರ ಮಾಸಾಶನ ಕ್ಕೆ ಅರ್ಜಿ ಹಾಕುವ ಮೊದಲೇ ಕಂದಾಯ ಇಲಾಖೆಯಿಂದ ನೀಡುವ 1200 ವೃದ್ಧಾಪ್ಯ ವೇತನ ನಿಲ್ಲಿಸುವ ನಿಯಮ ಬದಲಿಸಬೇಕು. ಈ ಬಗ್ಗೆ ಲಾಖೆಯ ನಿರ್ದೇಶಕರು ಹಾಗೂ ಸಚಿವರು ಪರಿಸೀಲಿಸಿ ಮರು ಅದೇಶ ಮಾಡಬೇಕು.ಹಾಗು ಸರ್ಕಾರದಿಂದ ಕಲಾವಿದರಿಗೆ ನೀಡುವ ಮಾಸಾಶನದ ಮೊತ್ತ 2500 ರೂ ಗಳನ್ನು ಕಲಾವಿದರ ಮರಣದ ನಂತರ ಅವರ ಪತ್ನಿಗೂ ನೀಡುವ ಮಾಡಬೇಕು.

ಹಾಗು ಬಹಳಷ್ಟು ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟದಲ್ಲಿರುತ್ತಾರೆ. ಅಂತಹವರು, ಸಲ್ಲಿಸಿರುವ ಅರ್ಜಿಗಳು ಮಂಜೂರು ಮಾಡಲು ವರ್ಷಗಳೇ ಕಳೆಯುತ್ತವೆ. ಇತ್ತ ವೃದ್ದಾಪ್ಯ ವೇತನವೂ ಇಲ್ಲ ಅತ್ತ ಮಾಸಾಶನ ವೂ ಇಲ್ಲವಾಗಿ ಕಲಾವಿದರು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾದ ಸ್ಥಿತಿ ಬಂದಿದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಮಾಸಾಶನಕ್ಕೆ ಅರ್ಜಿಗಳನ್ನು ಹಾಕಿರುವ ಕಲಾವಿದರು ಅದು ಮಂಜೂರಾಗಿ ಬರುವ ಮುಂಚೆಯೇ ನಿಧನ ರಾಗಿರುವ ಉದಾಹರಣೆಗಳಿವೆ.

ಈ ದಿಸೆಯಲ್ಲಿ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು, ಕಲಾವಿದರಿಗೆ, ಬೇರೆ ಮಾಸಾಶನ ನಿಲ್ಲಿಸದಂತೆ, ಕಲಾವಿದರ ಮಾಸಾಶನ ಮಂಜೂರಾದ ಮೇಲೆ ನಿಲ್ಲಿಸಬೇಕು. ಅರ್ಜಿ ಹಾಕಿರುವ ಕಲಾವಿದರಿಗೆ ಶೀಘ್ರು ಸಂದರ್ಶನಗಳನ್ನು ನಡೆಸಿ, ಅರ್ಹರಿಗೆ ಕೂಡಲೇ ಮಾಸಾಶನ ಮಂಜೂರು ಮಾಡಲು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಕಲಾವಿದರ ಹಿತ ಕಾಯ ಬೇಕೆಂದು ಎಂದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಕಲಾವಿದರ ಸಂಘದ ಕಾರ್ಯದರ್ಶಿ ಚಂದ್ರಶೇಕರ್ ಸಹ ಕಾರ್ಯದರ್ಶಿ ಮಂಜುನಾಥ, ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣಪ್ಪ, ಖಜಾಂಚಿ ಮುನಿ ಪಾಪಯ್ಯ ನಿರ್ದೇಶಕರುಗಳಾದ  ರವಿಕುಮಾರ್, ಎನ್ ತಮ್ಮಣ್ಣ, ಆಟೊ ರಾಮು, ನಾಗರಾಜಯ್ಯ ಇದ್ದರು.

 

Share This Article
error: Content is protected !!
";