ಇಮ್ಮಡಿಶ್ರೀಗಳ ಆಶೀರ್ವಾದ ಪಡೆದ ಭೋವಿ ನಿಗಮದ ಅಧ್ಯಕ್ಷ ರಾಮಪ್ಪ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೋವಿ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ನೆರ್ಲಗುಂಟೆ ಎಂ.ರಾಮಪ್ಪ ಅವರು ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು.
ನಿಗಮದ ಕಛೇರಿ ಕೆಲಸದ ಜೊತೆ ಜೊತೆಯಲ್ಲಿ ರಾಜ್ಯಾಪ್ರವಾಸ ಮಾಡಿ ಜನರ ಜೀವನ ಸ್ಥಿತಿಗತಿಯನ್ನು ಕುದ್ದಾಗಿ ಅರ್ಥೈಸಿಕೊಂಡು ಜನರಿಗೆ ಸಹಾಯ ಸ್ಪಂದನೆ ಸಹಕಾರ ಮಾಡಿ ಎಂದು ಶ್ರೀಗಳು ರಾಮಪ್ಪರವರಿಗೆ ಮಾರ್ಗದರ್ಶನ ಮಾಡಿದರು.
ಜನರಿಗೆ ಸ್ಪಂದಿಸುವ ಮನೋಭಾವದೊಂದಿಗೆ ಪಕ್ಷಕ್ಕೆ ಶಕ್ತಿತುಂಬುವ ಕಾರ್ಯನ್ಮೂಖಗೊಳ್ಳುವೆ. ಸರ್ಕಾರ ನೀಡುವ ಯೇಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ ಎಂದು ಎಂ ರಾಮಪ್ಪರವರು ತಿಳಿಸಿದರು.
ಈ ಸಂದರ್ಭದಲ್ಲಿ ಬಂಡೆ ರುದ್ರಪ್ಪ, ಚಲನಚಿತ್ರ ನಿರ್ಮಾಪಕ ಆನಂದಪ್ಪ, ಡಿ.ಸಿ.ಮೋಹನ, ಈ.ಮಂಜುನಾಥ, ವಡ್ಡರ ಸಿದ್ಧವನಹಳ್ಳಿ ಪ್ರಕಾಶ, ಗೌನಳ್ಳಿ ಗೋವಿಂದಪ್ಪ, ಟಿ.ನಾಗೇಂದ್ರಪ್ಪ, ಅಂಜಿನಪ್ಪ, ವೆಂಕಟಪ್ಪ, ಶಿವಮೊಗ್ಗ ಧೀರರಾಜು, ಚಲನಚಿತ್ರ ಅಕಾಡಮಿ ಸದಸ್ಯ ದೇಶಾದ್ರಿ ಹೊಸಮನಿ, ನಿರಂಜನ, ಎಬಿವಿಪಿ ಚಂದ್ರಶೇಖರ, ಹಿರಿಯೂರು ಚಂದ್ರಶೇಖರ, ಚಳ್ಳಕೆರೆ ವೆಂಕಟಪ್ಪ, ನಿವೃತ್ತ ಇಂಜಿನಿಯರ್ ಗೋಪಾಲ, ಕನಕದಾಸ, ಎ.ಅನಿಲ್ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

