ರಾಮಾಯಣ ದರ್ಶನಂ ಮಹಾಕಾವ್ಯ ಭರತ ಖಂಡದ ಧಾರ್ಮಿಕ ಗ್ರಂಥ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಮಾಯಣ ದರ್ಶನಂ, ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಈ ದಿನದಂದು ಅವರ ಜ್ಞಾನದ ವಿಚಾರವನ್ನು ಸ್ಮರಿಸಿ ಭಕ್ತಿ ಭಾವೈಕ್ಯತೆಯಿಂದ ನಮಿಸುತ್ತೇನೆ.

ಮಹರ್ಷಿ ವಾಲ್ಮೀಕಿಯವರ ಬಗ್ಗೆ ಅನೇಕ ಕಥೆಗಳಿವೆ.  ವಾಲ್ಮೀಕಿಯವರು ಹಿಂದೆ ರತ್ನಾಕರ ಎನ್ನುವ ಕಳ್ಳರಾಗಿದ್ದರು ಎನ್ನುವ ಉಲ್ಲೇಖವಿದೆ. ಒಂದು ದಿನ ನಾರದ ಮುನಿಯ ಮಾತುಗಳನ್ನು ಕೇಳುತ್ತಾ, ಅವರು ತನ್ನ ತಪ್ಪುಗಳನ್ನು ಅರಿತುಕೊಂಡು  ಅವರ ಹೃದಯವನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡು ಧರ್ಮದ ಮಾರ್ಗವನ್ನು ಅಳವಡಿಸಿಕೊಂಡರು.

ಶ್ರೀ ರಾಮನ ಹೆಸರನ್ನು ಜಪಿಸುವಂತೆ ನಾರದರು  ವಾಲ್ಮೀಕಿ ಅವರಿಗೆ ಸಲಹೆ ನೀಡಿದ್ದರು. ಈ ವಿಚಾರದ ಕುರಿತಾಗಿ ಪೌರಾಣಿಕ ಹಿನ್ನೆಲೆಯಲ್ಲಿ ನಂಬಲಾಗಿದೆ.

ಆ ಘಳಿಗೆಯಿಂದಲ್ಲೇ ವಾಲ್ಮೀಕಿ ಅವರು ರಾಮ ನಾಮದ ಜಪದಲಿ ಲೀನರಾಗುವ ಮೂಲಕ ತಪಸ್ವಿಯಾದರು. ವಾಲ್ಮೀಕಿ ಮಹರ್ಷಿಗಳ ತಪಸ್ಸಿಗೆ ಸಂತೋಷಗೊಂಡ ಬ್ರಹ್ಮ ದೇವನು ವಾಲ್ಮೀಕಿ ಅವರಿಗೆ ಜ್ಞಾನದ ಭಂಡಾರವನ್ನು ವರವಾಗಿ ಕೊಟ್ಟರು. ಜ್ಞಾನಾರ್ಜನೆಯ ವಿಚಾರಧಾರೆಯಿಂದ ಮಹರ್ಷಿಗಳು ರಾಮಾಯಣವನ್ನು ರಚಿಸಿದರು.  ಹಿಂದೂ ಧರ್ಮದಲ್ಲಿ ರಾಮಾಯಣವನ್ನು ಪೂಜಿಸಲಾಗುತ್ತದೆ. ರಾಮಾಯಣ ದರ್ಶನಂ ಮಹಾಕಾವ್ಯ ಭರತಖಂಡದ ಧಾರ್ಮಿಕ ಗ್ರಂಥವಾಗಿದೆ.

ಭರತಖಂಡದ ಐತಿಹಾಸಿಕ ಪರಂಪರೆಯಲ್ಲಿ ಎರಡು ಗ್ರಂಥಗಳಿವೆ ಒಂದು ರಾಮಾಯಣ ಮತ್ತೊಂದು ಮಹಾಭಾರತ. ರಾಮಾಯಣವನ್ನು ಶ್ರೀ ವಾಲ್ಮೀಕಿ ಮಹರ್ಷಿಗಳು ರಚಿಸಿದರೆ. ಮಹಾಭಾರತವನ್ನು ಶ್ರೀ ವ್ಯಾಸ ಮಹರ್ಷಿಗಳು ರಚಿಸಿದ್ದಾರೆ.

ಈ ಎರಡು ಮಹಾಕಾವ್ಯಗಳ ಬಗ್ಗೆ ಜ್ಞಾನ ಉಳ್ಳವರು ನ್ಯಾಯ, ನೀತಿ, ನಂಬಿಕೆ, ಸತ್ಯ, ಕರುಣೆ, ಧರ್ಮ ಕರ್ಮಗಳ ವಿಶ್ವಾಸವನ್ನು ಮೈಗೂಡಿಸಿಕೊಂಡು ನಾಗರಿಕ ಸಮಾಜದಲ್ಲಿ ಆದರ್ಶವಾಗಿ ಬದುಕು ಕಂಡಿದ್ದಾರೆ. ಲೇಖನ:ರಘು ಗೌಡ 9916101265

 

 

 

- Advertisement -  - Advertisement - 
Share This Article
error: Content is protected !!
";