ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೆಂಗಳೂರಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಕೇಸ್ ಪ್ರಕರಣ ಸಂಬಂಧ ಚಿತ್ರದುರ್ಗದ ರೇಣುಕಸ್ವಾಮಿ ಮನೆಗೆ ಕಳೆದ ಎರಡು ದಿನಗಳ ಹಿಂದೆ ರಂಭಾಪುರಿ ಶ್ರೀಗಳ ಭೇಟಿ ನೀಡಿದ್ದರು.
ಇಡೀ ಕುಟುಂಬದ ಮನಶಾಂತಿ, ರೇಣುಕಸ್ವಾಮಿ ಆತ್ಮಶಾಂತಿಗಾಗಿ ಪೂಜೆ ಸಲ್ಲಿಸಲು ರಂಭಾಪುರಿ ಶ್ರೀಗಳನ್ನ ರೇಣುಕಸ್ವಾಮಿ ತಂದೆ ಶಿವನಗೌಡ್ರು ಆಹ್ವಾನಿಸಿದ್ದರು.
ಮೊದಲಿಂದಲೂ ರಂಭಾಪುರಿ ಶ್ರೀಗಳ ಸಂಪರ್ಕದಲ್ಲಿ ರೇಣುಕಾಸ್ವಾಮಿ ಕುಟುಂಬ ಇದೆ. ಚಿತ್ರದುರ್ಗ ಮಾರ್ಗದಲ್ಲಿ ಶ್ರೀಗಳ ಸಂಚಾರ ಇದ್ದರೆ ಸ್ವಾಮಿ ಮನೆಯಲ್ಲೆ ಶ್ರೀಗಳು ವಾಸ್ತವ್ಯ ಹೂಡುವುದು ನಡೆದುಕೊಂಡು ಬಂದಿದೆ.
ರೇಣುಕಸ್ವಾಮಿ ಹತ್ಯೆ ಬಳಿಕ ಮೊದಲ ಬಾರಿ ರುದ್ರಾಭಿಶೇಕ, ಮನಶಾಂತಿ ಪೂಜೆಗೆ ಶ್ರೀಗಳು ಆಗಮಿಸಿರುವ ಕುರಿತು ರೇಣುಕಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ಮಾಧ್ಯಮಗಳಿಗೆ ಹೇಳಿಕೆ ನೀಡಿ ನಮ್ಮ ಮನೆಗೆ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಬಂದಿದ್ದರು. ನಮ್ಮ ಮಗನ ಆತ್ಮ ಶಾಂತಿಗಾಗಿ ಪೂಜೆ ಮಾಡಿ ನಮಗೆ ಆಶೀರ್ವಾದ ಮಾಡಿದ್ದಾರೆ. ಕಣ್ಣೀರುಡುತ್ತಲೆ ರಾಂಭಾಪುರಿ ಶ್ರೀಗಳ ಆಶೀರ್ವಾದ, ಪೂಜೆ ಕುರಿತು ಪ್ರತಿಕ್ರಿಯೆ ನೀಡಿದರು.
ಶ್ರೀಗಳುನಮಗೆ ಧೈರ್ಯ, ಆತ್ಮ ಶಾಂತಿ ಕೊಟ್ಟು, ಆಶೀರ್ವಾದ ಮಾಡಿದ್ದಾರೆ. ಭಗವಂತ ನಿಮ್ಮ ಪರವಾಗಿ ಇದ್ದಾರೆ ಒಳ್ಳೆಯದಾಗತ್ತೆ ಎಂದು ಹೇಳಿದ್ದಾರೆ. ನಮಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗತ್ತೆ ಅಂತ ನಂಬಿದ್ದೇವೆ. ಸರ್ಕಾರ ನಮ್ಮ ಸೊಸೆಗೆ ಖಾಯಂ ನೌಕರಿ ಕೊಡುತ್ತದೆ ಎಂದು ನಂಬಿದ್ದೇವೆ.
ನಮಗೆ ಗುರುಗಳ ಆಶೀರ್ವಾದ ಸದಾ ಇದೆ, ಎಲ್ಲಾ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಎಲ್ಲಾ ಶ್ರೀಗಳ ಆಶೀರ್ವಾದದ ಮೇಲೆ ನಮ್ಮನ್ನ ಕಾಪಾಡುವ ನಂಬಿಕೆ ಇದೆ. ನಮ್ಮ ಮೊಮ್ಮಗು ಹುಟ್ಟಿದ ಬಳಿಕ ನಮಗೆ ಆಶೀರ್ವಾದ ಅತ್ಯವಶ್ಯಕ ಇತ್ತು. ಪೂಜೆ ಸಮಯದಲ್ಲಿ ಮಗು,ಸೊಸೆ ಇದ್ದಿದ್ದರೆ ಚನಾಗಿತ್ತು, ತವರಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀಗಳು ಹೇಳಿದಂತೆ ಮನಗೆ ಬಂದು ಮನೆಗೆ ವಾಸ್ತು ಶಾಂತಿ, ಮಗನ ಆತ್ಮ ಶಾಂತಿ, ಮನಶಾಂತಿ ಪೂಜೆ ಸಲ್ಲಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ ಎಂದರು.
ಮೃತ ರೇಣುಕಾಸ್ವಾಮಿ ಸಂಬಂಧಿ ಷಡಕ್ಷರಯ್ಯ ಪ್ರತಿಕ್ರಿಯೆ ನೀಡಿ, ರೇಣುಕಾಸ್ವಾಮಿ ಹತ್ಯೆಯಾದಾಗ ರಂಬಾಪುರಿ ವೀರ ಸೋಮೇಶ್ವರ ಶ್ರೀ ಬಂದಿದ್ರು. ಆ ವೇಳೆ ಹೇಳಿದ ಮಾತಿನಂತೆ ಮನೆಯಲ್ಲಿ ಪೂಜೆ ಮಾಡಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತೆ ಎಂಬ ಭಾವನೆ ಇದೆ.
ಪೂಜೆ ಮಾಡಿದೀವಿ ಅಂದ ಮಾತ್ರಕ್ಕೆ ಸಮಾಧಾನ ತರುವ ಮಾತಲ್ಲ. ಮಗನನ್ನು ಕಳೆದುಕೊಂಡ ದುಃಖ ಇದ್ದೇ ಇರುತ್ತೆ. ಮನಸ್ಸಿನ ತೃಪ್ತಿಗಾಗಿ ಪೂಜೆ ಮಾಡುವಂಥದ್ದು ಅಷ್ಟೇ. ಇರೋ ಒಬ್ಬ ಮಗನನ್ನ ಕಳೆದುಕೊಂಡು ದುಃಖ ಅದು ನಿರಂತರ.
ಪುತ್ರಶೋಕ ನಿರಂತರ ಎನ್ನುವಂತೆ, ಈ ದುಃಖ ನಿರಂತರ. ನಮ್ಮ ಮನಸ್ಸಿನ ನೆಮ್ಮದಿಗಾಗಿ ಬಂದು ಶ್ರೀಗಳು ಪೂಜೆ ಮಾಡಿದ್ದಾರೆ ಎಂದು ತಿಳಿಸಿದರು.
ಮೇಲೆ ಅವನೊಬ್ಬ ಜಡ್ಜ್ ಇದ್ದಾನೆ ಎನ್ನುವುದು ಕುಟುಂಬಕ್ಕೆ ಆತ್ಮತೃಪ್ತಿ ಇದೆ ಎಂದು ತಿಳಿಸಿದರು.

