ಮಕ್ಕಳ ಪ್ರತಿಭೆ ಹೊರತರಲು ವಸ್ತು ಪ್ರದರ್ಶನ ಸಹಕಾರಿ-ರಮೇಶ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಕ್ಕಳಲ್ಲಿರುವ ಪ್ರತಿಭೆ ಹೊರ ತರಲು ವಿಜ್ಞಾನ ಮತ್ತು ಗಣಿತದ ಬಗ್ಗೆ ಅರಿವು ಮೂಡಿಸಿ ಪ್ರಾಯೋಗಿಕ ಜ್ಞಾನ ವೃದ್ಧಿಸಲು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಎಸ್ ಎಲ್ ಆರ್ ಎಸ್ ಶಾಲೆಯ ಕಾರ್ಯದರ್ಶಿ ಎಸ್.ಆರ್.ರಮೇಶ್ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಎಸ್.ಎಲ್.ಆರ್.ಎಸ್ ಶಾಲೆಯಲ್ಲಿ ಆಯೋಜನೆ ಮಾಡಿದ್ದ ವಸ್ತು ಪ್ರದರ್ಶನವನ್ನು ರಮೇಶ್ ಉದ್ಘಾಟಿಸಿ ಮಾತನಾಡಿದರು.

 ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸ್ವತಃ ಮಕ್ಕಳೇ ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಪಟ್ಟ ಕಲಾ ಕೃತಿಗಳನ್ನು ತಯಾರು ಮಾಡಿರುವುದು ಸಂತಸದ ವಿಷಯ ಎಂದರು. 

ಮಕ್ಕಳ ಪ್ರತಿಭೆಯನ್ನು ಇನ್ನು ಮುಂದೆ ನಮ್ಮ ಶಾಲೆಯಲ್ಲಿ ಮಾತ್ರವಲ್ಲದೇ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸಬೇಕು. ಇದಕ್ಕೆ ಶಾಲಾ ಆಡಳಿತ ಮಂಡಳಿ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದರು.

ಮಕ್ಕಳು ವಿವಿಧ ಪ್ರಾಣಿ ಪಕ್ಷಿಗಳ ಪರಿಚಯ, ಸೋಲಾರ್ ಪ್ಯಾನಲ್, ಮನುಷ್ಯ ಅಂಗಾಂಗ ಭೂತದ ಮನೆ ಸೇರಿದಂತೆ ವಿವಿಧ ಪ್ರಯೋಗಗಳ ಕಲಾ ಕೃತಿಗಳನ್ನು ರಚಿಸಿ ಶಾಲೆಗೆ ತರಲಾಗಿತ್ತು. 

 ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಹರಿತ ರಮೇಶ್, ಶಾಲೆಯ ಸದಸ್ಯ ರಾಹುಲ್, ಮುಖ್ಯ ಶಿಕ್ಷಕ ಎನ್.ಎನ್.ನಾಗರಾಜ್ ಹಾಗೂ ಶಾಲೆಯ ಸಿಬ್ಬಂದಿ ಹಾಜರಿದ್ದರು.

 

 

Share This Article
error: Content is protected !!
";