ಬಿಜೆಪಿ ಹಳೆ ಹಗರಣ ಮುನ್ನೆಲೆಗೆ: ಭಾಗ್ಯಲಕ್ಷ್ಮಿ ಯೋಜನೆ ಅಕ್ರಮವನ್ನು ಎಸ್ ಐ ಟಿ ಗೆ ನೀಡಿ, ಸಿಎಂಗೆ ರಮೇಶ್‌ ಬಾಬು ಆಗ್ರಹ

khushihost
  • ಚಂದ್ರವಳ್ಳಿ ನ್ಯೂಸ್, ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಮತ್ತೊಂದು ಹಗರಣ ಮುನ್ನಲೆಗೆ ಬಂದಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿರುವುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬಹಿರಂಗಪಡಿಸಿದ್ದಾರೆ.
  • ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, 2011 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಅಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿದೆ. ಸುಮಾರು 10 ಲಕ್ಷ ಸೀರೆಗಳನ್ನು ಹಂಚಿಕೆ ಮಾಡಲಾಗಿತ್ತು. ರೂ.100 ಮುಖಬೆಲೆಯ ಸೀರೆಗಳಿಗೆ ಹೆಚ್ಚು ಬೆಲೆ ಕೊಟ್ಟು ಸೂರತ್ ಇಂದ ತರಿಸಲಾಗಿತ್ತು. ಈ ಹಗರಣದ ಬಗ್ಗೆ ವಿಧಾನ ಪರಿಷತ್ ಅಲ್ಲಿ ಮೋಟಮ್ಮ ಅವರು ವಿರೋಧ ಪಕ್ಷದ ನಾಯಕರಾಗಿ ಇದ್ದಾಗ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ. ಸದಸ್ಯರಾಗಿದ್ದ ಯು. ಬಿ. ವೆಂಕಟೇಶ್ ಅವರು ಹಾಗೂ ದಯಾನಂದ ಅವರು ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರು. ಈ ಹಗರಣದ ಬಗ್ಗೆ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
  • ರಾಜಸ್ಥಾನದಿಂದ ಬಂದಿರುವ ಲೆಹರ್ ಸಿಂಗ್ ಅವರು ನಮ್ಮ ಕರ್ನಾಟಕದ ಹಿತ ಕಾಪಾಡುತ್ತಾರೋ ಅಥವಾ ರಾಜಸ್ಥಾನದ ಹಿತ ಕಾಪಾಡುತ್ತಾರೋ ನೋಡಬೇಕು. ಅಕ್ರಮಗಳ ಬಗ್ಗೆ ಮಾತನಾಡುವ ಅವರು ಈ ಸೀರೆ ಹಗರಣದ ಬಗ್ಗೆ ದನಿ ಎತ್ತಬೇಕು, ತನಿಖೆ ನಡೆಸಿ ಎಂದು ಸಿಎಂಗೆ ಪತ್ರ ಬರೆಯಬೇಕು ಎಂದು ತಿಳಿಸಿದರು.
  • ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಟಿ.ಜೆ.ಅಬ್ರಹಾಂ, ಪ್ರದೀಪ್ ಕುಮಾರ್, ಸ್ನೇಹಮಯಿ ಕೃಷ್ಣ ಮುಡಾ ಪ್ರಕರಣದಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಮುಖ್ಯಮಂತ್ರಿ ವಿರುದ್ಧ ಸೆಕ್ಷನ್ 17 ಎ ಅಡಿ ತನಿಖೆ ನಡೆಸಲು ಸೂಚಿಸಲಾಗಿದೆ. ಇವರು ಸುಪ್ರೀಂ ಕೋರ್ಟಿನಲ್ಲಿ ಹೇಗೆ ಶುಲ್ಕ ಕಟ್ಟುತ್ತಾರೆ. ಅಷ್ಟೊಂದು ಹಣ ಇವರ ಬಳಿ ಇದೆಯೇ? ಎಂದು ಪ್ರಶ್ನಿಸಿದರು.

- Advertisement -  - Advertisement - 
Share This Article
error: Content is protected !!
";