ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ಸರ್ಕಾರಿ ನೌಕರರ ಸಂಘದ, ಹಿರಿಯೂರು ತಾಲೂಕು ಘಟಕದ ಅಧ್ಯಕ್ಷರಾಗಿ ಆರ್ ರಮೇಶ್ ಆಯ್ಕೆಯಾಗಿದ್ದಾರೆ.
ಆರ್.ರಮೇಶ್ ಮತ್ತು ಪಿಡಿಒ ಹರ್ಷವರ್ಧನ್ ಮಧ್ಯ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಧ್ಯಕ್ಷ ಪಟ್ಟ ಏರಲು ಹಲವು ರೀತಿಯ ಸರ್ಕಸ್ ಮಾಡಿದ್ದರು.
ರಮೇಶ್ ಅವರು ಪ್ರತಿಸ್ಪರ್ಧಿಯ ವಿರುದ್ಧ 34 ಮತಗಳಲ್ಲಿ 24 ಮತಗಳನ್ನು ಪಡೆದು ಜಯ ಸಾಧಿಸಿದರೆ, ಹರ್ಷವರ್ಧನ್ ಅವರು ಕೇವಲ 14 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ರಮೇಶ್ ಅವರ ಗೆಲುವಿಗೆ ಸ್ನೇಹಿತರು, ನೌಕರರು, ಆಪ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ರಮೇಶ್ ಬೆಂಬಲಿಗರು ವಿಜಯೋತ್ಸವ ಕೂಡಆಚರಿಸಿದರು.
ನೌಕರರ ಆಯ್ಕೆ-
ಹಿರಿಯೂರು ತಾಲೂಕು ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಬಿಸಿಎಂ ಇಲಾಖೆಯ ಶಿವಕುಮಾರ್, ಖಜಾಂಚಿಯಾಗಿ ಪ್ರಾಥಮಿಕ ಶಾಲಾ ನಿರ್ದೇಶಕ ಬಿ ಆರ್ ಶ್ರೀನಿವಾಸ್, ತಾಲೂಕು ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ರಮೇಶ್ ಆಯ್ಕೆಯಾಗಿದ್ದಾರೆ.