ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಖಿಲ್‌ಕುಮಾರಸ್ವಾಮಿ ಸೋತಿದ್ದಾರೆ ಎಂದು ಅಪಹಾಸ್ಯ ಮಾಡುವ ಸಿದ್ದರಾಮಯ್ಯ ಇದು ನಿಮಗೆ ನೆನಪಿದೆಯೇ..? ಎಂದು ಜೆಡಿಎಸ್ ಪ್ರಶ್ನಿಸಿದೆ.
ಹಿಂಬಾಗಿಲ ಮೂಲಕ ಮಗನನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದೀರಿ.ಲೋಕಸಭಾ ಚುನಾವಣೆ ವೇಳೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸೋಲುವ ಭಯದಿಂದ ಮಗನನ್ನು ನಿಲ್ಲಿಸಲು ಹೆದರಿದ ರಣಹೇಡಿ ಮುಖ್ಯಮಂತ್ರಿ ನೀವು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತು ಸುಣ್ಣವಾಗುತ್ತೇನೆಂದು ಬಾದಾಮಿ ಕ್ಷೇತ್ರಕ್ಕೆ ಓಡಿಹೋದ ಪಲಾಯನವಾದಿ ಯಾರು ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ಮಗ ಸ್ಪರ್ಧಿಸಿದ್ದ ಸುರಕ್ಷಿತ ಕ್ಷೇತ್ರ ವರುಣಾದಿಂದ ಕಣಕ್ಕಿಳಿದು, ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆದರಿದ ಪುಕ್ಕಲ ರಾಜಕಾರಣಿಯಲ್ಲವೇ ! ನಿಖಿಲ್‌ಕುಮಾರಸ್ವಾಮಿ ಅವರು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ.
ಅವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಲು ತಯಾರಿದ್ದಾರೆ! ಆದರೆ ನೀವು ಮತ್ತು ನಿಮ್ಮ ಮಗನಿಗೆ ಆ ಧೈರ್ಯ ಇದೆಯೇ..? ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ನಿಖಿಲ್‌ಕುಮಾರಸ್ವಾಮಿ ಅವರು ಪಕ್ಷಕ್ಕಾಗಿ ಮತ್ತು ಕಾರ್ಯಕರ್ತರಿಗಾಗಿ ಸ್ಪರ್ಧಿಸುತ್ತಾರೆ. ಆದರೆ ನಿಮ್ಮಂತೆ ಅಧಿಕಾರ ದಾಹಕ್ಕಾಗಿ ಅಲ್ಲ ಎಂದು ಜೆಡಿಎಸ್ ಸಮರ್ಥಿಸಿಕೊಂಡಿದೆ.