ಕಲಾವಿದ ಪುಟ್ಟಯ್ಯನವರಿಗೆ ರಂಗ ಕಲಾಜ್ಯೋತಿ ಪ್ರಶಸ್ತಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಹಿರಿಯ ರಂಗಭೂಮಿ ಭೂಮಿ ಕಲಾವಿದರೂ
, ಖಾಸಬಾಗ್ ದರ್ಗಾಪುರದ ಶ್ರೀ ರಥ ಸಪ್ತಮಿ ಶನಿದೇವರ ದೇವಸ್ಥಾನದ ಪ್ರದಾನ ಅರ್ಚಕ ಎಂ. ಪುಟ್ಟಯ್ಯನವರಿಗೆ 40ನೇ ಮಾಸದ ರಂಗಕಲಾ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಹಾಗೂ ಕಲಾವಿದರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು.

- Advertisement - 

ಕಾರ್ಯಕ್ರಮದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ. ಎಂ. ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಕಾರ್ಯದರ್ಶಿ ಪುಟ್ಟಸಿದ್ದಯ್ಯ, ಸಂಘಟನಾ ಕಾರ್ಯದರ್ಶಿ ಮೋಪರಹಳ್ಳಿ ನಾಗರಾಜ್, ನಿರ್ದೇಶಕರಾದ ರಬ್ಬನಹಳ್ಳಿ ಮುನಿರಾಜು, ನಾಗರತ್ನಮ್ಮ, ಚಿಕ್ಕ ತುಮಕೂರು ಮುನಿರಾಜ್, ಸಂಜೀವರಾಯಪ್ಪ ರಾಜಘಟ್ಟ, ಕಾರಳ್ಳಿ ಮುನಿಕೃಷ್ಣಪ್ಪ, ದ್ಯಾಮಪ್ಪ, ಕುಂದಾಣ ನಾಗರಾಜ್, ಅರುವನ ಹಳ್ಳಿ ಮುನಿರಾಜ್, ಬೀರಸಂದ್ರ ಮಂಜು ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದ್ದರು.

- Advertisement - 

 

 

- Advertisement - 

Share This Article
error: Content is protected !!
";