ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಏಕಾದಶಿ ಜಾತ್ರೆ ಅಂಗವಾಗಿ 2025ರ ಜುಲೈ 5ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಲಕ್ಷ್ಮಿ ರಂಗನಾಥಸ್ವಾಮಿ ಟ್ರಸ್ಟ್ ನವರು ತಿಳಿಸಿದರು.
ಜುಲೈ 5 ರಂದು ಮೊದಲೊಂದತ್ತು, ಜುಲೈ 6 ರಂದು ಏಕಾದಶಿ ಹಣ್ಣು ಕಾಯಿ ಫಲಾಹಾರ, ಜುಲೈ 7 ರಂದು ಊರಿನಲ್ಲಿ ಸ್ವಾಮಿಯ ಹೆಸರಲ್ಲಿ ದ್ವಾದಶಿ ದಾಸೋಹ, ಜುಲೈ 8 ರಂದು ಭಕ್ತರಿಂದ ಅಕ್ಕಿ ಸಂಗ್ರಹ ಕಾರ್ಯಕ್ರಮ, ಜುಲೈ 9 ರಂದು ಸ್ವಾಮಿ ರಥಾರೂಢನಾಗಿ ಮರಡಿ ಮೇಲಕ್ಕೆ ಹೋಗುವುದು, ಜುಲೈ 10ರ ಗುರುವಾರ ಬೆಳಿಗ್ಗೆ 10.30 ರಿಂದ 2.30 ರ ವರೆಗೆ ಬಾಯಿ ಬೀಗ ಚುಚ್ಚುವುದು, ಹೆಜ್ಜೆ ನಮಸ್ಕಾರ, ಚಕ್ರಾಂತಿ, ಉರುಳು ಸೇವೆ, ಚೌಲೋಪನಯನ, ಮಹಾಮಂಗಳಾರತಿ ಹಾಗೂ ಸಂಜೆ ದೀಪಾರಾಧನೆ ನಡೆಯಲಿದೆ.
ಇದೇ ದಿನ ಬೆಳಿಗ್ಗೆ 10.30 ರಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.