ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡತುಮಕೂರು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗೆಜ್ಜಗದಹಳ್ಳಿ ಪಾಳ್ಯದ ರಂಗಸ್ವಾಮಯ್ಯನವರು ಆಯ್ಕೆಯಾಗಿದ್ದರೆ.
ನೂತನ ಅಧ್ಯಕ್ಷ ರಂಗಸ್ವಾಮಯ್ಯನವರು ಪತ್ರಿಕೆಯೊಂದಿಗೆ ಮಾತನಾಡಿ ಪಂಚಾಯ್ತಿಯನ್ನು ಮಾದರಿ ಪಂಚಾಯ್ತಿ ಮಾಡುವ ಹಂಬಲವಿದೆ. ಸಿಕ್ಕಿರುವ ಅಲ್ಪಾವದಿಯಲ್ಲಿ ಪಂಚಾಯ್ತಿಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿ ನನ್ನದು ಎಂದು ಹೇಳಿದರು.
ನೂತನ ಅಧ್ಯಕ್ಷರನ್ನು ಎಲ್. ಐ. ಸಿ. ಮಂಜುನಾಥ್, ಎಸ್. ಎಸ್. ಟಿ. ಮಂಜುನಾಥ್, ಲೋಕೇಶ್, ನಾಗರಾಜ್ ಬಾಬು ಸೇರಿದಂತೆ ಹಲವಾರು ಮುಖಂಡರು ಅಭಿನಂದಿಸಿದ್ದಾರೆ.

