ರಂಗೇನಹಳ್ಳಿ: ಫೆ.01 ರಿಂದ 4 ರವರೆಗೆ ಕಾಳು ಹಬ್ಬ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ರಂಗೇನಹಳ್ಳಿಯ ಶ್ರೀ ಕ್ಷೇತ್ರದಲ್ಲಿರುವ ಚಿತ್ರಲಿಂಗೇಶ್ವರ ಸ್ವಾಮಿ
, ತಿರುಮಲಸ್ವಾಮಿ, ತಿಮ್ಮಪ್ಪಸ್ವಾಮಿಯ ಕಾಳು ಹಬ್ಬದ ವಾರ್ಷಿಕ ಸಮಾರಂಭ ಫೆ.01 ರಿಂದ 4 ರವರೆಗೆ ಹಮ್ಮಿಕೊಳ್ಳಲಾಗಿದೆ.

ಫೆ.01ರಂದು ಬೆಳಿಗ್ಗೆ 7.30ಕ್ಕೆ ಸ್ವಾಮಿಗಳ ಝಂಡ ಎತ್ತುವುದು, ಕಾಳು ಮೀಸು ತರುವುದು, ಶ್ರೀ ಸ್ವಾಮಿಗಳು ವೇದಾವತಿ ನದಿಗೆ ಗಂಗಾಪೂಜೆಗೆ ಹೊರಡುವುದು. ಫೆ.02ರಂದು ಸೂರ್ಯೋದಯದ ಸಮಯದಲ್ಲಿ ಶ್ರೀ ಸ್ವಾಮಿಗಳ ಪೂಜೆಯೊಂದಿಗೆ ಕಾಳು ಪ್ರಸಾದ ವಿನಿಯೋಗ ಮೀಸಲು ಅಕ್ಕಿ ಮತ್ತು ವೆಚ್ಚ ತೆಗೆದುಕೊಳ್ಳುವುದು.

- Advertisement - 

ಫೆ.03ರಂದು ಬೆಳಿಗ್ಗೆ 10ಕ್ಕೆ ಹೆಜ್ಜೆ ನೆಡೆಯುವುದು, ಗುಡಿ ಗೌಡರಿಂದ ದೊಡ್ಡ ಅರತಿ ಹಚ್ಚುವುದು ನಂತರ ಅನ್ನ ಸಂತರ್ಪಣೆ ನೆರವೇರಲಿದೆ. ಫೆ.04ರಂದು ಶ್ರೀ ಸಾಮಿಗಳ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ತೋಪಿಗೆ ಹೋಗುವುದು, ನಂತರ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";