ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ರಥಸಪ್ತಮಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.
ಸೂರ್ಯದೇವನಿಗೆ ಪೂಜೆ, 108 ಸೂರ್ಯ ನಮಸ್ಕಾರ ಅಗ್ನಿಹೋತ್ರ ಹಾಗೂ ಸೂರ್ಯನಿಗೆ ಅರ್ಘ್ಯ ಕೊಡುವ ಮೂಲಕ ರಥಸಪ್ತಮಿಯನ್ನು ಯೋಗ ಗುರು ಶ್ರೀಧರ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಾಸವಿ ಪತಂಜಲಿ ಯೋಗ ಸಮಿತಿಯ ಎಲ್ಲ ಯೋಗ ಬಂಧುಗಳು, ಜಿಲ್ಲಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷ ದೇವಾನಂದ ನಾಯ್ಕ್, ಯೋಗ ಗುರು ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಜೆ.ಎಸ್.ಗುರುಮೂರ್ತಿ, ವಾಸವಿ ಶಾಲೆಯ ಕಾರ್ಯದರ್ಶಿ ಅಜೇಯ್ ಹಾಗೂ ವಿವಿಧ ಯೋಗ ಸಮಿತಿಯರು ಪಾಲ್ಗೊಂಡಿದ್ದರು. ಎಲ್ಲ ಯೋಗಬಂಧುಗಳಿಗೆ ಪ್ರಸಾದ ಹಾಗೂ ಆದಿತ್ಯ ಹೃದಯ ಹನುಮಾನ್ ಚಾಲೀಸ್ ಪುಸ್ತಕ ವಿತರಿಸಿದರು.