ರವಿಚಂದ್ರನ್ ಸೋದರ ಬಾಲಾಜಿ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ
  ದೇವಾಲಯಕ್ಕೆ  ಕನ್ನಡ ಚಿತ್ರರಂಗದ ಖ್ಯಾತ  ನಟ ನಿರ್ದೆಶಕ  ರವಿಚಂದ್ರನ್ ಅವರ ಸಹೋದರ ಬಾಲಾಜಿ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪೂರ್ವ ಇತಿಹಾಸದ ಶ್ರೀ ಘಾಟಿ ಸುಬ್ರಹ್ಮಣ್ಯ ಜಾತ್ರೆ ಹಾಗು ಪ್ರಸಿದ್ದ ದಾರ್ಮಿಕ ಕ್ಷೇತ್ರಕ್ಕೆ ಹಲವಾರು ಗಣ್ಯರು ತಮ್ಮ ಇಷ್ಟಾರ್ಥಗಳನ್ನು ಈಡೇರಿಕೆಗಾಗಿ ಬಂದು ದೇವರ ಮೂರೆ ಹೋಗುವುದರ ಜೊತೆಗೆ ಸ್ವಾಮಿಯ ದರುಶನ ದಿಂದ ಮನ ಶಾಂತಿಯಿಂದ ತೃಪ್ತರಾಗುತ್ತಾರೆ.

ಕೆಲ ತಿಂಗಳ ಹಿಂದೆ ಖ್ಯಾತ ಕ್ರಿಕೇಟ್ ಅಟಗಾರ ಕೆ ಎಲ್ ರಾಹುಲ್  ಮಾನ್ಯ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ಹಾಗು ತೆಲಗು ತಮಿಳಿನ ಚಿತ್ರ ನಟ ನಟಿಯರು ಹಾಗು ಇತ್ತೀಚಿಗಷ್ಟೇ ನಟಿ ಮಾಲಾಶ್ರೀ  ಅವರು ಮಕ್ಕಳೊಂದಿಗೆ ಘಾಟಿ ದೇವಾಲಯಕ್ಕೆ ಭೇಟಿ ಬೆನ್ನಲ್ಲೇ, ಚಿತ್ರ ರಂಗದ ಖ್ಯಾತ ನಟ ರವಿಚಂದ್ರನ್ ರವರ ಸಹೋದರ  ಬಾಲಾಜಿ ಅವರು ಕುಟುಂಬ ಸಮೇತ ಬಂದು ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ದೇವಾಲಯದ ಆಡಳಿತ ಮಂಡಳಿ ಬಾಲಾಜಿ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಈ ಸಂಧರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಶ್ರೀನಿಧಿ, ಕಾರ್ಯದರ್ಶಿ ಎಂ ನಾರಾಯಣಸ್ವಾಮಿ, ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಮನು, ಮುಖಂಡ ಮುತ್ತಣ್ಣ ಹಾಗು ದೇವಾಲಯದ ಸಿಬ್ಬಂದಿ ಮತ್ತಿತರರಿದ್ದರು.

Share This Article
error: Content is protected !!
";