ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದ್ವಿತೀಯ ಪಿ.ಯು.ಸಿ ಯಲ್ಲಿ ವಿಜ್ಞಾನ ವಿಭಾಗದಲ್ಲಿ ರವಿಕಿರಣ್ ಜೋಗಿ.ಎನ್ ರವರು ೬೦೦ಅಂಕಕ್ಕೆ ೫೯೫ ಅಂಕ ಪಡೆದಿರುವುದಕ್ಕೆ ಅಲೆಮಾರಿ ಜೋಗಿ ಸಮುದಾಯದ ಬಂಧುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ರವಿಕಿರಣ್.ಎನ್.ಜೋಗಿ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಚಿತ್ರದುರ್ಗ ತಾಲೂಕಿನ ಉಪ್ಪನಾಯಕನಹಳ್ಳಿ ನಿವಾಸಿ ತಂದೆ ನಾಗರಾಜ್ ತಾಯಿ ಸಿದ್ದಮ್ಮ ಇವರುಗಳು ಅಲೆಮಾರಿ ಜೋಗಿ ಸಮಾಜದವರಾಗಿದ್ದು ಉನ್ನತ ವಿದ್ಯಾಭ್ಯಾಸಕ್ಕಾಗಿ ತಂದೆ ತಾಯಿ ಮಗನನ್ನು ಡಾಕ್ಟರ್ ಆಗಲಿ ಎಂದು ತಮ್ಮ ಕಷ್ಟಗಳೆನ್ನಲ್ಲಾ ಮರೆತು ತನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಿರುತ್ತಾರೆ.
ಇದರ ಪ್ರತಿಫಲವಾಗಿ ೬೦೦ಕ್ಕೆ ೫೯೫ ಅಂಕ ಪಡೆದಿರುತ್ತಾನೆ. ಹಾಗೆಯೇ ಹೊಳಲ್ಕೆರೆಯ ಅಲೆಮಾರಿ / ಅರೆಅಲೆಮಾರಿ ವಿದ್ಯಾರ್ಥಿನಿಲಯದಲ್ಲಿ ೬ ರಿಂದ ೧೦ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿ ಸರ್ಕಾರ ಶಾಲೆಗೆ ಕೀರ್ತಿಯನ್ನು ತಂದಿರುತ್ತಾನೆ. ಇಂತಹ ತಳ ಸಮುದಾಯದ ಮಕ್ಕಳು ಮುಖ್ಯವಾಹಿನಿಗೆ ಬರಲಿ ಎಂದು ವಕೀಲ ಪ್ರತಾಪ್ ಜೋಗಿ ಹಾರೈಸಿದ್ದಾರೆ.
ದ್ವಿತೀಯ ಪಿ.ಯು.ಸಿ ಅತೀ ಹೆಚ್ಚು ಪಡೆದವರು ಅತೀ ಕಡಿಮೆ ಅಂಕ ಪಡೆದವರು, ಅನುತ್ತೀರ್ಣರಾದವರು ಯಾವ ವಿದ್ಯಾರ್ಥಿಗಳು ಮುಂದಿನ ಪೂರ್ವಕ ಪರೀಕ್ಷೆಯಲ್ಲಿ ಅಂಕ ಪಡೆಯುವುದಕ್ಕೆ ಅವಕಾಶವಿರುತ್ತದೆ ಯಾರು ಸಹ ತಪ್ಪು ನಿರ್ಧಾರ ಕೈಗೊಳ್ಳದೇ ಆತಂಕಕ್ಕೊಳಗಾಗದೇ ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ ಎಂದು ಪ್ರತಾಪ್ ಜೋಗಿ ಕಿವಿ ಮಾತು ಹೇಳಿದ್ದಾರೆ.