ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಆರ್ ಸಿಬಿ(ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಗೂ ಕೋಲ್ಕತ್ತಾ ನೈಟರ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ.
ಮೇ17 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳ ಮುಖಾಮುಖಿ ನಿಗದಿಯಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತ್ತು.
ಆದರೆ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಖರೀದಿಸಿದ್ದವರಿಗೆ ಆರ್‌ಸಿಬಿ ಫ್ರಾಂಚೈಸಿ ಹಣ ವಾಪಸ್ ನೀಡಲು ತೀರ್ಮಾನಿಸಿದೆ.
ಮಳೆಯಿಂದ ಪಂದ್ಯ ರದ್ದಾದ ಬಳಿಕ ನಿರಾಸೆಗೊಂಡಿದ್ದ ಅಭಿಮಾನಿಗಳು ತಮ್ಮ ಟಿಕೆಟ್ ಹಣವನ್ನ ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ.
ಟಿಕೆಟ್ ಹಣ ಪಡೆಯುವುದು ಹೇಗೆ?: ಮ್ಯಾನ್ಯುಯಲ್ ಟಿಕೆಟ್ ಖರೀದಿಸಿದ್ದವರು ತಮ್ಮ ಟಿಕೆಟ್‌ಗಳನ್ನು ಅಧಿಕೃತ ಮಾರಾಟಗಾರರಿಗೆ ಹಿಂದಿರುಗಿಸಿ ಹಣ ಪಡೆದುಕೊಳ್ಳಲು ಸೂಚಿಸಲಾಗಿದೆ.
ಡಿಜಿಟಲ್ ಟಿಕೆಟ್ ಖರೀದಿಸಿದ್ದವರಿಗೆ ತಾವು ಹಣ ಪಾವತಿಸಲು ಬಳಸಿದ್ದ ಬ್ಯಾಂಕ್ ಖಾತೆಗೆ ಮುಂದಿನ 10 ದಿನಗಳಲ್ಲಿ ಹಣ ಸಂದಾಯವಾಗಲಿದೆ. ಆಕಸ್ಮಾತ್, ಮೇ.31 ರೊಳಗೆ ಹಣ ಸಂದಾಯವಾಗದಿದ್ದರೆ, ನಿಮ್ಮ ಟಿಕೆಟ್ ಬುಕ್ಕಿಂಗ್ ಮಾಹಿತಿಯನ್ನು [email protected]ಗೆ ಮೇಲ್ ಮಾಡಬಹುದಾಗಿದೆ. ಆದರೆ ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಮರುಪಾವತಿ ಇಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಷ್ಟಪಡಿಸಿದೆ.