ಆರ್ ಸಿಬಿ ಐಪಿಎಲ್ ಕಪ್ ಗೆಲ್ಲಲು ಗಣ್ಯರ ಶುಭ ಹಾರೈಕೆಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಬಾರಿ ಆರ್ ಸಿಬಿ ತಂಡ ಉತ್ತಮವಾಗಿ ಪ್ರದರ್ಶನ ನೀಡಿ ಫೈನಲ್ ಪ್ರವೇಶ ಮಾಡಿದ್ದು ಕಪ್ ಗೆಲ್ಲಲಿದೆ ಎಂಬ ವಿಶ್ವಾಸ ಹೆಚ್ಚಿದೆ. ಆದರೆ ಪಂದ್ಯ
ಗೆಲ್ಲಲೇಬೇಕು ಎಂಬ ಒತ್ತಡ ಕೂಡ  ತಂಡದ ಮೇಲೆ ಹೆಚ್ಚುತ್ತಿದೆ. ಇದರ ನಡುವೆ ಆರ್ ಸಿಬಿ- ಪಂಜಾಬ್ ನಡುವಿನ IPL 2025 ಟೂರ್ನಿಯ ಫೈನಲ್ಸ್ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಆರ್ ಸಿಬಿ ತಂಡಕ್ಕೆ ಶುಭಕೋರಿ ಗೆದ್ದು ಬರುವಂತೆ ಆಶಿಸುತ್ತಿದ್ದಾರೆ.

ಆರ್ ಸಿಬಿ-ಪಂಜಾಬ್ ನಡುವಿನ ಫೈನಲ್ಸ್ ಪಂದ್ಯದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಆರ್ ಸಿಬಿ ಹುಡುಗರು ಅಹ್ಮದಾಬಾದ್ ನಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹಳ ಸಮಯದ ನಂತರ ಆರ್ ಸಿಬಿ ತಂಡದವರು ಫೈನಲ್‌ಗೆ ಬಂದಿದ್ದಾರೆ. ನನಗೆ ಸಂತಸವಾಗುತ್ತಿದೆ. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕದ ಜನರು ಅವರ ಗೆಲುವಿಗಾಗಿ ಕಾಯುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ಜನರು ಅಹಮದಾಬಾದ್‌ನಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ. ಅವರು ಗೆದ್ದು ಮತ್ತೆ ಬರಲಿ ಎಂದು ನಾವು ಆಶಿಸೋಣ ಮತ್ತು ಪ್ರಾರ್ಥಿಸೋಣ ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.

 

Share This Article
error: Content is protected !!
";