ಸ್ನೇತಕೋತ್ತರ ಪದವೀಧರರ ಮರು ಮಿಲನ ಅವಿಸ್ಮರನೀಯ

News Desk

ವರದಿ-ಬಿ.ಕುಮಾರೇಗೌಡ, ಮೂಗ್ತಿಹಳ್ಳಿ.
ಚಂದ್ರವಳ್ಳಿ ನ್ಯೂಸ್, ಮಂಡ್ಯ
/ಚಿಕ್ಕಮಗಳೂರು:
ಬದುಕಿನ ಮುಸ್ಸಂಜೆಯ ಹೊಸ್ತಿಲಲ್ಲಿರುವ
57-62 ವರ್ಷಗಳ ಆಸುಪಾಸಿನ ಸ್ನೇಹಿತರು 33 ವರ್ಷಗಳ ನಂತರ 2ನೇ ಸಲ ಮಿಲನ ಆಗಿದ್ದು ಮಾತ್ರ ವಿಸ್ಮಯವೇ ಸರಿ.

ಈ ಮೊದಲು 2025ರ ಜುಲೈ ಮೊದಲ ವಾರದಲ್ಲಿ ಸ್ನೇಹಿತರು ಸೇರಿಕೊಂಡಿದ್ದೇವು. ಈಗ ಮತ್ತೆ ಸೆಪ್ಟೆಂಬರ್ ತಿಂಗಳ ಕೊನೆ ವಾರದಲ್ಲಿ ಸ್ನೇಹಿತರು ಸೇರಿಕೊಂಡಿದ್ದವು. ಈ ಮೂರು ತಿಂಗಳ ಅಂತರದಲ್ಲಿ ಓರ್ವ ಸ್ನೇಹಿತ ವಿಜಯ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ.

- Advertisement - 

ಸ್ನೇತಕೋತ್ತರ ಪದವಿ ಪೂರೈಸಿದ್ದ ಸಹಪಾಠಿಗಳು ಮುಂದಿನ ಭೇಟಿಯಲ್ಲಿ ಪತ್ನಿ, ತಮ್ಮ ಮಕ್ಕಳು, ಮೊಮ್ಮಕ್ಕಳ ಸಮೇತ ಮತ್ತೆ ಒಟ್ಟಿಗೆ ಕಲೆಯಬೇಕೆಂಬ ಬೇಡಿಕೆ ವ್ಯಕ್ತಪಡಿಸಿದ ಸ್ನೇಹಿತರ ಆಸೆ ಸದ್ಯದಲ್ಲೇ ಈಡೇರಿಸುವ ಸಾಧ್ಯತೆ ಕಂಡು ಬರಲಿದೆ.

2ನೇ ಸಲ ಸ್ನೇಹಿತರು ಭೇಟಿ ಮಾಡಿದ್ದು ಅದೊಂದು ಅವಿಸ್ಮರಣೀಯ ಕ್ಷಣ. 33 ವರ್ಷದ ಬಳಿಕ ಸ್ನೇಹಿತರ 2ನೇ ಸಮ್ಮಿಲನ. ದಾವಣಗೆರೆ ಪಿಜಿ ಸೆಂಟರ್ ನಲ್ಲಿ ಮೂರು ದಶಕಗಳ ಹಿಂದಿನ ನೆನಪಿನ ಕ್ಷಣಗಳು ಮನಸ್ಸಿನಲ್ಲಿ ಮೂಡುತ್ತಿದ್ದವು. ಮಾಡಿದ ಚೇಷ್ಟೆಯ ಸಮಯಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದರು. ಜತೆಗೆ ಮೂರು ಮಂದಿ ಗೆಳತಿಯರ ಕುರಿತು ಪ್ರಸ್ತಾಪಗಳು ವ್ಯಕ್ತವಾದವು. ಒಬ್ಬೊಬ್ಬರು ಬೆಳೆದ ಬಗೆಯ ಬಗ್ಗೆ ಚರ್ಚೆಗಳು ಮೂಡಿ ಬರುತ್ತಿದ್ದವು. ಸ್ನೇಹಿತರು ಮಾಡಿದ್ದ ಹಲವು ತರಲೆಗಳನ್ನು ನೆನಸಿಕೊಂಡು ನಗುನಗುತ್ತಲೇ ಮೌನಕ್ಕೆ ಜಾರಿದ್ದರು.

- Advertisement - 

ಅರೆ ಇದ್ಯಾವುದೋ ಮೈ ಆಟೋಗ್ರಾಫ್ ಚಿತ್ರದ ಸನ್ನಿವೇಶವಲ್ಲ. ಇದು ರಿಯಲ್ ಕಥೆ. 1991-92ನೇ ಸಾಲಿನ ಸ್ನಾತಕೋತ್ತರ ಸ್ನೇಹಿತರುಗಳು 33 ವರ್ಷಗಳ ನಂತರ ಪುನರ್‌ಮಿಲನ – `ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಕಂಡ ದೃಶ್ಯಾವಳಿಗಳು ಹಲವು.

ದಾವಣಗೆರೆಯ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಬಾಳು ನೀಡಿದ್ದ, ಮುದೆಗೌಡರ ಮುದಿಯಪ್ಪನವರ ಕನಸಿನ ಎಪಿಎಸ್ ಹಾಸ್ಟೆಲ್ ಉಚಿತವಾಗಿ ಹಲವು ಸ್ನೇಹಿತರಿಗೆ ಎರಡು ವರ್ಷಗಳ ಕಾಲ ದಾಸೋಹ ನೀಡಿದ್ದನ್ನೂ ಸ್ನೇಹಿತರು ಮರೆಯಲಿಲ್ಲ. ಆದರೆ ಈಗ ಆ ಹಾಸ್ಟೆಲ್ ಕಾಣುತ್ತಿಲ್ಲ. ಜೊತೆಗೆ ಹಾಸ್ಟೆಲ್ ಇದ್ದ ಜಾಗ ಈಗ ವಾಣಿಜ್ಯ ಕಾಂಪ್ಲೆಕ್ಸ್ ಆಗಿ ಮಾರ್ಪಟ್ಟಿರುವುದು ಬಡ ವಿದ್ಯಾರ್ಥಿಗಳ ಪಾಲಿಗೆ ಮರೀಚಿಕೆ ಆಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಸ್ನೇಹಿತ ಎಂ.ಬಿ ಸುರೇಶ್ ಅವರು ಮೂರು ದಿನಗಳ ಕಾಲ ನೀಡಿದ ಆತಿಥ್ಯ ಮರೆಯಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದ ಸುಮಧುರ ಕ್ಷಣ, ನೋವು-ನಲಿವಿನ ಸರಕುಗಳನ್ನು ಎಳೆ ಎಳೆಯಾಗಿ ಹಂಚಿಕೊಂಡರು. ಅಲ್ಲದೆ ಪ್ರೀತಿ-ಸ್ನೇಹ ಬಾಂಧವ್ಯದ ಜೊತೆಗೆ ಬಾಲ್ಯದ ಆಟ-ತುಂಟಾಟಗಳು ನೆನಪಿಸಿಕೊಂಡರು. ಗುರು-ಶಿಷ್ಯರ ಆತ್ಮೀಯತೆ ಭಾವ-ಮನಸ್ಸಿನ ಬೆಸುಗೆಯ ನಿನಾದ ಮಾರ್ದನಿಸುತ್ತಿತ್ತು. ಹಳೆ ಸ್ನೇಹಿತರ ಅಪೂರ್ವ ಸಮಾಗಮದಲ್ಲಿ ಸಂತೋಷದ ಕಡಲಿನಲ್ಲಿ ಮಿಂದೆದ್ದರು. 

ಮೂರು ದಿನಗಳ ತಂಗಿದ್ದ ಸ್ನೇಹಿತರು ರಾಜ್ಯದ ನಾನಾ ಜಿಲ್ಲೆಗಳಲ್ಲಿ ನೆಲೆಸಿರುವ ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸವಿನೆನಪುಗಳನ್ನು ಮೆಲುಕು ಹಾಕಿಕೊಂಡರು. ತಾವು ಕಲಿತ ಜ್ಞಾನ ಮತ್ತು ಮಾರ್ಗದರ್ಶನಕ್ಕಾಗಿ ಕೃತಜ್ಞತೆಯನ್ನು ಮತ್ತು ಅವರ ಜೀವನದಲ್ಲಿ ಗುರುವರ್ಯರು ವಹಿಸಿದ ಪಾತ್ರವನ್ನು ಗುರುತಿಸುವ ಮತ್ತು ಗೌರವಿಸುವ ಮೂಲಕ ಅವಿಸ್ಮರಣೀಯ ಕ್ಷಣಗಳನ್ನು ಪ್ರತಿಯೊಬ್ಬರು ನೆನೆದು ಕಣ್ತುಂಬಿಕೊಂಡರು.

ಸ್ನೇಹ ಮಿಲನ ಅರ್ಥಪೂರ್ಣವಾಗಿ ಸಂಯೋಜಿಸಿ ಹೃದಯ ಸ್ಪರ್ಶಿಯಾಗಿ ನಡೆಸಿಕೊಂಡಿದ್ದ ಪರಿಗೆ ಧನ್ಯತಾಭಾವವನ್ನು ಮೆರೆದರು. ಜೀವನದ ಸಿಹಿ-ಕಹಿ ಕ್ಷಣಗಳನ್ನು ಮೆಲಕು ಹಾಕಿದರು, ಸದ್ಯದ ಬದುಕಿನ ಕುರಿತು ಕುಶಲೋಪರಿ ಹಂಚಿಕೊಂಡು ಆನಂದದ ಕ್ಷಣಕ್ಕೆ ಸಾಕ್ಷಿಯಾದರು. 

ನಿವೃತ್ತಿ ಅಂಚಿನಲ್ಲಿರುವ ನಮ್ಮಗಳ ಜೀವನ ಮತ್ತಷ್ಟು ಮಾಗಬೇಕಿದೆ. ಆಗೊಮ್ಮೆ ಈಗೊಮ್ಮೆ ಸೇರಿಕೊಳ್ಳುವ ಮೂಲಕ ತಮ್ಮ ನೋವುಗಳನ್ನು ಮರೆತು ಸಂತಸದ ಕ್ಷಣಗಳನ್ನು ಸ್ಮರಿಸುವ ಕೆಲಸ ತಮ್ಮ ಕೈಯಲ್ಲಿರುವುದರಿಂದ ಬದುಕು ಮತ್ತೊಂದು ದಿಕ್ಕಿನತ್ತ ಕೊಂಡೊಯ್ಯಲಿದೆ. ತಮ್ಮ ಮಕ್ಕಳು ದೊಡ್ಡವರಾಗಿ ಬೆಳೆದ ಪರಿ ನೋಡಿ ಅತೀವ ಖುಷಿ ಪಟ್ಟರು. ನಾವು ಸೇರಿದ್ದ ಸ್ನೇಹಿತರ ಕುರಿತು ಎಂ.ಬಿ ಸುರೇಶ್ ಅವರ ಪುತ್ರ ವೈದ್ಯಕೀಯ ಪದವೀಧರನಾಗಿದ್ದು ಮತ್ತೇ ಮತ್ತೇ ಎಲ್ಲರೂ ಸೇರಿ ಸಂತೋಷವಾಗಿ ಇರಬೇಕು, ನಿಮ್ಮ ಸ್ನೇಹಿತರಂತೆ ನಮ್ಮ ಸ್ನೇಹಿತರು ಸೇರುತ್ತಿಲ್ಲ, ನೀವೇ ಪುಣ್ಯವಂತರು ಎಂದು ಸ್ಮರಿಸಿದ್ದು ಮತ್ತು ಮೈಸೂರಿನಿಂದ ವಿಶೇಷವಾಗಿ ತಂದಿದ್ದ ಮೈಸೂರು ಪಾಕ್ ನೀಡಿ ಆಶೀರ್ವಾದ ಪಡೆಯುವ ಮೂಲಕ ಮಾದರಿಯಾದ ಸುರೇಶ್ ಪುತ್ರ ದರ್ಶನ್ ಅವರ ಸಂಸ್ಕಾರ ತಮ್ಮ ಜೀವನ ಸಾರ್ಥಕವಾಯಿತು ಎಂಬ ಭಾವ ಮೂಡಿ ಬಂದಿತ್ತು. ಸ್ನೇಹಿತರ ಸಂಗಮದ ಅಮೂಲ್ಯ ಕ್ಷಣಗಳಿಗೆ ಕಣ್ಣಂಚಿನಲ್ಲಿ ಆನಂದ ಭಾಷ್ಪ ಜಿನುಗುತ್ತಿದ್ದು ಕಂಡು ಬಂತು.

ಗೆಳೆಯ ಸುರೇಶ, ನಿನ್ನ ಸ್ನೇಹದ ಕಾಳಜಿಯನ್ನ ಬಲ್ಲೆ, ನಾನ್ದನ್ನುಂಡುಬಲ್ಲೆ! ಈ ಅಪೂರ್ವ ಸ್ನೇಹ ನಿನ್ನೆ ಮೊನ್ನೆಯದಲ್ಲ, ನಿನಗೊಂದು ಸ್ನೇಹದ ಸಲಾಮು, ಮಹಾಭಾರತದ ಪುಟಗಳನ್ನ ತಿರುವಿದಾಗ ಎರಡು ಸ್ನೇಹ ಬಾಂಧವ್ಯ ಬೆಸೆದ ಹೃದಯಗಳಿವೆ. ಅವು ದುರ್ಯೋಧನ ಮತ್ತು ಕರ್ಣ. ಮತ್ತು ಕೃಷ್ಣ ಮತ್ತು ಸುಧಾಮ ಸ್ನೇಹ.
ಈ ಸ್ನೇಹವು ನಿಷ್ಠೆ
, ಪರಸ್ಪರ ಗೌರವ ಮತ್ತು ಪರಿಪೂರ್ವ ಬದ್ಧತೆಯ ಪ್ರತೀಕವಾಗಿದೆ. ಪಂಪನ ಉದ್ಗಾರವನೊಮ್ಮೆ ಕಣ್ಣಾಡಿಸಬೇಕು.

ಆದರೆ ಇಂದಿನ ಎ ಐ ಯುಗದಲ್ಲೆ ಕೆಟ್ಟವರೇ ಬಹಳಷ್ಟು ತುಂಬಿದ ಈ ಮಾನವ ಕಾನನದಲ್ಲಿ ಮಮತೆ ಎಂಬ ಭಾವನೆಗಳ ಸ್ನೇಹ ಬೆಸೆದು ಬೆಳೆದ ಪರಿಶುದ್ಧ ಸ್ನೇಹ ಮಾತ್ರ ಅವಿಸ್ಮರನೀಯ. ದೃವತಾರೆಯಾಗಿ ನಿಲ್ಲುವ ಕೆ ಆರ್ ಪೇಟೆ ಸುರೇಶನಿಗೆ ಮನ ತುಂಬಿದ ನಮನಗಳು. ನಮ್ಮ ನಿಮ್ಮಗಳ ಸ್ನೇಹ ಸದಾ ಹಳಸದಿರಲಿ ಮಾಸದಿರಲಿ”.
ತಾರಚಂದ್ರ ಸಿಂಹ,
(ಬಯಲು ಸೀಮೆಯ ಬಿಳಿ ಹುಡುಗ).

ಆತ್ಮೀಯ ಮಿತ್ರರೇ 1991- 92ನೇ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗದ ಸ್ನೇಹಿತರು ಬಹಳ ವರ್ಷಗಳ ನಂತರ ಒಂದೆಡೆ ಸೇರುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಇದು ಸ್ನೇಹ ಸಂಬಂಧಗಳನ್ನ ಉತ್ತಮಗೊಳಿಸುವ ಕಷ್ಟ ಸುಖಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಈ ಕೂಟಗಳು ಬುನಾದಿ ಇದ್ದಂತೆ. ಸ್ನೇಹಿತನಾದ ಸುರೇಶ್ ನೀಡಿದ ಆತಿಥ್ಯೋಪಚಾರ ನಿಜವಾದದ್ದು. ಇವರ ಸುಪುತ್ರ ಡಾ.ದರ್ಶನ್ ರವರು ವಿನಮ್ರತೆಯಿಂದ ಗುರು ಹಿರಿಯರಿಗೆ ನೀಡುವ ಗೌರವ ಈಗಿನ ಯುವಕರಿಗೆ ಮಾದರಿ. ಮುಂಬರುವ ದಿನಗಳಲ್ಲಿ ಮತ್ತೆ ಸೇರಲು ಸ್ನೇಹಕೂಟಗಳಲ್ಲಿ ಭಾಗವಹಿಸಲು ಎಲ್ಲಾ ಮಿತ್ರರಿಗೆ ಸದೃಢ ಆರೋಗ್ಯ ಕರುಣಿಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ”.
ವಂದನೆಗಳೊಂದಿಗೆ ತಮ್ಮ ಸ್ನೇಹಿತ, ನಾಗರಾಜಪ್ಪ.ಬಿ, ಪ್ರಾಚಾರ್ಯರು ದಾವಣಗೆರೆ.

ಕೆ.ಆರ್ ಪೇಟೆ ಸುರೇಶ್ ಮಿತ್ರನ ಆಮಂತ್ರಣ ಮತ್ತು ಆತಿಥ್ಯ ಮರೆಯಲಾರದ ಕ್ಷಣಗಳು. ಸ್ನಾತಕೋತ್ತರ ಪದವಿ ಮಿತ್ರರಾದ ನಾವೆಲ್ಲ 33 ವರ್ಷಗಳ ನಂತರ ಸೇರಲು ಕಾರಣಕರ್ತರಾದ ಕೆ ಆರ್ ಪೇಟೆ ಸುರೇಶರವರಿಗೆ ಧನ್ಯವಾದಗಳು. ಸುರೇಶ್ ರವರು ಸ್ನೇಹಜೀವಿ. ದೂರವಾಣಿ ಮೂಲಕ ಸಂಪರ್ಕಿಸಿ ಕೆಆರ್ ಪೇಟೆಗೆ ಆಗಮಿಸಲು ಕೋರಿದರು. ಈ ಕೋರಿಕೆ ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನವಂತೆ ಆ ರೀತಿ ಆಮಂತ್ರಣ ನೀಡಿದರು.
ಆಗ ಚಿತ್ರದುರ್ಗದಿಂದ ಮುದ್ರಣ ಮಾಧ್ಯಮದ ಮಿತ್ರ ಹರಿಯಬ್ಬೆ ಸಿ.ಹೆಂಜಾರಪ್ಪ ಮತ್ತು ಚನ್ನಬಸಪ್ಪ ಆದ ನಾವು ಸಾಗರದಿಂದ ಗಂಗಾಧರನ ಕಾರಿನ ಮೂಲಕ ಕೆ ಆರ್ ಪೇಟೆಗೆ ಸುಮಾರು 7:30ಕ್ಕೆ ತಲುಪಿದೆವು.
ಸುರೇಶ್ ರವರು ದಾರಿಯಲ್ಲಿ ನಿಂತು ನಮ್ಮನ್ನು ಸ್ವಾಗತಿಸಿದ ರೀತಿ ಮರೆಯಲು ಸಾಧ್ಯವೇ ಇಲ್ಲ. ನಂತರ ಭೋಜನ ವ್ಯವಸ್ಥೆ ನಮ್ಮ ಪ್ರಯಾಣದ ಆಯಾಸ ಪರಿಹರಿಸಿ ನಿದ್ರೆಗೆ ಜಾರಿದವು. ಆ ರಾತ್ರಿ ಬೆಂಗಳೂರಿನ ತಾರಾ ಚಂದ್ರ ಸಿಂಹ ಮತ್ತು ನಿರಂಜನ ಬಂದು ಸೇರಿದರು.

ತಡರಾತ್ರಿ ದಾವಣಗೆರೆಯಿಂದ ನಾಗರಾಜಪ್ಪ, ಮಹಾರುದ್ರಯ್ಯ ಮಠದ್, ಬಸವರಾಜ್, ಗುರುಮೂರ್ತಿ ಆಗಮಿಸಿದರು. ಬೆಳಿಗ್ಗೆ ಚಿಕ್ಕಮಗಳೂರಿನ ಜಯಚಂದ್ರ ಕುಮಾರೇ ಗೌಡರು ಬಂದು ಸೇರಿದರು. ಒಟ್ಟಿಗೆ 12 ಜನ ಗೆಳೆಯರು ಹೃದಯ ಪೂರ್ವಕ ಆತಿಥ್ಯ ಸ್ವೀಕರಿಸಿ ಸ್ಥಳೀಯ ಪ್ರವಾಸ ಹೊರಟೆವು.

ಹೊಸ ಹೊಳಲು ನರಸಿಂಹಸ್ವಾಮಿ ದರ್ಶನ ಪಡೆದು ಭೂಕನಕೆರೆ ಮೂಲಕ ಭೂ ವರಹಾ ನಾಥಸ್ವಾಮಿ ದೇವಸ್ಥಾನದ ಭವ್ಯತೆ ರಮ್ಯತೆಗೆ ಬೆರಗಾದೆವು. ಅಲ್ಲಿ ಪ್ರಸಾದ ಸ್ವೀಕರಿಸಿ KRS ಹಿನ್ನೀರಿನಲ್ಲಿ ನೆರೆಸಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದ ವೀಕ್ಷಣೆಗೆ ಹೊರಟೆವು. ನಿಜಕ್ಕೂ ಅತ್ಯದ್ಭುತ ಮನಸ್ಸಿಗೆ ಉಲ್ಲಾಸ ನೀಡಿತು. ಏಕೆಂದರೆ ಕಾವೇರಿ ನೀರಿನಿಂದ ಸುತ್ತಾಡಿ ಅಲ್ಲಿಂದ ಹೊರಟು ಪ್ರಶಾಂತ ಪರಿಸರ ಅಲ್ಲಿನ ವ್ಯವಸ್ಥೆ ಕಂಡು ಬೆರಗಾದೆವು. ಅಲ್ಲಿಂದ ಶಕ್ತಿ ದೇವತೆಯ ಗುಡಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿದವು.

ಸುಮಾರು 5:00 ಸುರೇಶ ತಾಯಿ ಮನೆಗೆ ಭೇಟಿ ನೀಡಿ ತಾಯಿಯ ಆತಿಥ್ಯ ಸ್ವೀಕರಿಸಿ ಊರಿನ ಸೌಂದರ್ಯ ಮನಸ್ಸಿಗೆ ಮುದ ನೀಡಿತು. ಆ ರಾತ್ರಿ ಮೃಷ್ಟಾನ್ನ ಭೋಜನ ವ್ಯವಸ್ಥೆ ಹೋಳಿಗೆ ತುಪ್ಪ ಮೈಸೂರು ಪಾಕ್ ಇತ್ಯಾದಿ ಇತ್ಯಾದಿ ಸವಿದೆವು.

ಸ್ನೇಹಿತ ಸುರೇಶ್ ರವರು ಪುತ್ರ ಮೈಸೂರಿನಿಂದ ಆಗಮಿಸಿ ಪರಿಚಯ ಮಾಡಿಕೊಂಡು ತಲೆಬಾಗಿ ನಮಸ್ಕರಿಸಿ ಆಶೀರ್ವಾದ ಪಡೆದರು. ಸರಳತೆ ಸೌಮ್ಯತೆ ಕಂಡು ವಿಸ್ಮಯರಾದೆವು. ಭಾನುವಾರ ಮುಂಜಾನೆ ಉಪಹಾರ ಸೇವಿಸಿ ಮೇಲುಕೋಟೆ ಚೆಲುವನಾರಾಯಣ ಮತ್ತು ಯೋಗ ನರಸಿಂಹ ಸ್ವಾಮಿಯ ದರ್ಶನ ಪಡೆದು ಪುನೀತರಾದವು. ಮಧ್ಯಾಹ್ನ ಅಲ್ಲೇ ಪ್ರಸಾದ ಸ್ವೀಕರಿಸಿದ ನಂತರ ಗೆಳೆಯ ಸುರೇಶ್ ರವರಿಗೆ ಅಭಿನಂದನೆ ಸಲ್ಲಿಸಿದವು.

ಆಗ ಗೆಳೆಯನ ಬೀಳ್ಕೊಟ್ಟ ರೀತಿ ಅಚ್ಚಹಸುರಾಗಿ ಮನಸ್ಸಿನಲ್ಲಿ ಉಳಿದಿದೆ. ತವರಿನ ಗುಡಿಯನ್ನು ಗಂಡನ ಮನೆಗೆ ಕಳಿಸುವಂತೆ ಒಂದು ಬ್ಯಾಗ  ತುಂಬಾ ತೆಂಗಿನ ಕಾಯಿ ಸಿಹಿಯ ಬಾಕ್ಸ್ ಸಾವಯವ ಬೆಲ್ಲ, ಗೋಡೆ ಗಡಿಯಾರ ಕೀ ಬಂಚುಗಳು ಇತ್ಯಾದಿ ಕಾಣಿಕೆ ನೀಡುವುದರ ಮೂಲಕ ನಮಗೆ ಊರುಗಳಿಗೆ ತೆರಳಲು ಅನುಮತಿ ನೀಡಿದರು. ಇದು ಶ್ಲಾಘನೀಯ ಇದರ ನೆನಪಲ್ಲೇ ನಮ್ಮ ನಮ್ಮ ಊರು ತಲುಪಿದೆವು. ಮರೆಯಲಾರದ ಮಂಡ್ಯದ ಕೆ ಆರ್ ಪೇಟೆ ಪ್ರವಾಸಗಿರಿಗೆ ನಂದನವನವಾಗಿದೆ”. ತಮ್ಮ ಆತ್ಮೀಯ ಗೆಳೆಯ ವಿ.ಚನ್ನಬಸಪ್ಪ, ಚಿತ್ರದುರ್ಗ.

ಹಳೆಯ ಸ್ನೇಹಿತರನ್ನು ಭೇಟಿಯಾದ ಅನುಭವವೇ ಅದೆಷ್ಟೋ ವಿಶೇಷ. ಕಾಲವು ಎಷ್ಟು ದೂರ ಕೊಂಡೊಯ್ದರೂ, ಸ್ನೇಹದ ಬಾಂಧವ್ಯವನ್ನು ಕಡಿದು ಹಾಕಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಒಂದು ಜೀವಂತ ಸಾಕ್ಷಿ. ಹಿಂದೆ ಕಾಲೇಜಿನ ದಿನಗಳಲ್ಲಿ ನಾವು ಸೇರಿ ಕಳೆಯುತ್ತಿದ್ದ ನೆನಪುಗಳು, ಮರುಭೇಟಿಯಲ್ಲಿ ಮತ್ತೆ ಜೀವಂತವಾದವು. ಆ ದಿನಗಳ ಹಾಸ್ಯ, ಆಟ-ಪಾಟ, ಕನಸುಗಳು, ಚರ್ಚೆಗಳು ಎಲ್ಲವೂ ಕ್ಷಣಾರ್ಧದಲ್ಲಿ ಕಣ್ಣೆದುರು ಮೂಡಿದವು.

ಮರುಭೇಟಿಯ ಸಂದರ್ಭವು ಕೇವಲ ಒಟ್ಟಿಗೆ ಸೇರುವುದಷ್ಟೇ ಅಲ್ಲ, ಜೀವನ ಯಾನದ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಯಿತು. ಕೆಲವರು ಉದ್ಯೋಗದಲ್ಲಿ ಯಶಸ್ಸು ಕಂಡಿದ್ದರು. ಕೆಲವರು ಕುಟುಂಬ ಜೀವನದಲ್ಲಿ ಸಂತೋಷ ಕಂಡಿದ್ದರು. ಕೆಲವರು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಪ್ರತಿಯೊಬ್ಬರ ಕಥೆಯೂ ವಿಭಿನ್ನವಾಗಿದ್ದರೂ ಸ್ನೇಹದ ಅಡಿಬಂಡೆ ಒಂದೇ ಆಗಿತ್ತು.

ಆ ದಿನ ಕಳೆದ ಪ್ರತಿಯೊಂದು ಕ್ಷಣವೂ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತಾಗಿತ್ತು. ನಗೆ ಹಾಸ್ಯಎಲ್ಲವೂ ಒಂದೇ ಸಮಯದಲ್ಲಿ ಅರಳಿ ಆ ದಿನವನ್ನು ಅಮೂಲ್ಯವಾಗಿಸಿತು.

 ಹಳೆಯ ಸ್ನೇಹಿತರ ಈ ಸಂಗಮ ನಮ್ಮ ಬದುಕಿನಲ್ಲಿ ಹೊಸ ಉತ್ಸಾಹವನ್ನು ತುಂಬಿತು. ಮನುಷ್ಯನು ಎಷ್ಟು ಎತ್ತರಕ್ಕೆ ಹೋದರೂ, ಅವನ ಹೃದಯಕ್ಕೆ ನೆಮ್ಮದಿ ನೀಡುವುದು ಹಳೆಯ ಸ್ನೇಹವೇ ಎಂಬುದನ್ನು ಮತ್ತೊಮ್ಮೆ ನೆನಪಿಸಿತು.
ಎಸ್.ಗುರುಮೂರ್ತಿ, ದಾವಣಗೆರೆ.

Share This Article
error: Content is protected !!
";