ಕನ್ನಡ ಪುಸ್ತಕ ಓದಿ-ಬಹುಮಾನ ಗೆಲ್ಲಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕನ್ನಡಿಗರಲ್ಲಿ
  ಕನ್ನಡ ಪುಸ್ತಕ  ಪ್ರೀತಿಯನ್ನು  ಬೆಳೆಸಲು   ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ  ಎಂಬ ಸ್ಪರ್ಧಾತ್ಮಕ  ಪರೀಕ್ಷೆ ನಡೆಯಲಿದೆ ಎಂದು ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು,   ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ  ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.   ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು‌  ಎಂಬ ಮೂರು ವರ್ಗದವರಿಗೆ  ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. 

- Advertisement - 

 ದೊಡ್ಡಬಳ್ಳಾಪುರದ ವಿವಿಧ ಸಂಘಟನೆಗಳ‌ವತಿಯಿಂದ ನಡೆಯುತ್ತಾ ಬರುತ್ತಿರುವ ಈ ಸ್ಪರ್ಧೆಯಲ್ಲಿ ಈ  ವರ್ಷ  “ಕುವೆಂಪು” ಅವರ ಪುಸ್ತಕ ಓದಿದ ನಂತರ ಪರೀಕ್ಷೆ ಬರೆದು  ಬಹುಮಾನಗಳನ್ನು ಗೆಲ್ಲ ಬಹುದಾಗಿದೆ.  ನವೆಂಬರ್ 23 ರಂದು  ದೊಡ್ಡಬಳ್ಳಾಪುರ ನಗರದ  ಎಂಎಬಿಎಲ್  ಪ್ರೌಢಶಾಲೆಯಲ್ಲಿ ಪರೀಕ್ಷೆ ನಡೆಯುತ್ತದೆ ಎಂದರು.

     ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಕಾರ್ಯಕ್ರಮ  ಪುಸ್ತಕ ಓದುವ ಅಭ್ಯಾಸವನ್ನು ಪ್ರೋತ್ಸಾಹಿಸಲು ಆಯೋಜಿಸಲಾದ ಒಂದು ಸ್ಪರ್ಧೆಯಾಗಿದೆ. ‘‘ ಕನ್ನಡ ಪುಸ್ತಕ ಗಳನ್ನು ಕೊಳ್ಳುವುದು ಮತ್ತು ಓದುವುದು ನಿಜವಾದ ಕನ್ನಡಾಭಿಮಾನವಾಗಿದೆ.  ‘‘ಜಗತ್ತಿನ ಜ್ಞಾನ ಅರಿಯಲು ಪುಸ್ತಕ ಗಳು ಸಹಕಾರಿ ಮತ್ತು ಪರಿಣಾಮಕಾರಿ ಆಗಿದೆ.   ನಿರಂತರ  ಓದಿನಿಂದ‌  ಓದುಗರಿಗೆ  ಜ್ಞಾನ ವಿಸ್ತರಿಸುತ್ತದೆ.    ಕನ್ನಡ  ಪುಸ್ತಕ  ಓದಿನ  ಮೂಲಕ ಪಡೆಯುವ ಜ್ಞಾನ ಕನ್ನಡ ಕಟ್ಡುವ ಕೆಲಸಕ್ಕೂ ಸಹಕಾರಿ ಆಗಲಿದೆ.  ಕನ್ನಡ ಅಭಿಮಾನ ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಪುಸ್ತಕಗಳನ್ನು ಎಷ್ಟು ಜನ ಕೊಳ್ಳುತ್ತಾರೆ ಮತ್ತು ಓದುತ್ತಾರೆ ಎಂಬುದು  ಕನ್ನಡ  ಭಾಷೆಯ ಸ್ಥಿತಿ-ಗತಿಯನ್ನು ಅಳೆಯುವ ನಿಜವಾದ ಮಾನದಂಡಗಳಲ್ಲಿ ಒಂದು ಎಂದರು. 

- Advertisement - 

      ಡಿಜಿಟಲ್ ಮಾಧ್ಯಮಗಳು ವೇಗವಾದ ಮಾಹಿತಿಯನ್ನು ಒದಗಿಸಿದರೂ, ಪುಸ್ತಕಗಳು ಆಳವಾದ ಮತ್ತು ಗಮನಾರ್ಹ ಅಧ್ಯಯನಕ್ಕೆ ಅವಕಾಶ ನೀಡುತ್ತವೆ. ಪುಸ್ತಕಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿವೆ. ಅವು ಜ್ಞಾನ, ವಿವೇಕ ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪುಗೊಳಿಸುತ್ತವೆ. ಇಂದು ಡಿಜಿಟಲ್ ಜಗತ್ತಿನಲ್ಲಿಯೂ ಪುಸ್ತಕಗಳ ಮಹತ್ವ ಕಡಿಮೆಯಾಗಿಲ್ಲ.    ಪುಸ್ತಕಗಳು ಭಾಷಾ ಕೌಶಲ್ಯ, ಸೃಜನಾತ್ಮಕತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತವೆ.ಪುಸ್ತಕಗಳ ಓದಿನಿಂದ ಪದಗಳ ಶಬ್ದಕೋಶ ಹೆಚ್ಚುತ್ತದೆ, ಬರವಣಿಗೆ ಕೌಶಲ್ಯ ಸುಧಾರಿಸುತ್ತದೆ ಮತ್ತು ಸಂವಹನ ಸಾಮರ್ಥ್ಯಗಳು ಉತ್ತಮಗೊಳ್ಳುತ್ತವೆ ಎಂದರು.      

      ನವಕರ್ನಾಟಕ ಪುಸ್ತಕ ಪ್ರಕಾಶನ ವಿಶ್ವಮಾನ್ಯರು ಮಾಲಿಕೆಯಲ್ಲಿ  ಪ್ರಕಟಿಸಿರುವ   ಮತ್ತು ಟಿ.ಎಸ್.ಗೋಪಾಲ್ ಅವರು ಬರೆದಿರುವ  ಕುವೆಂಪು ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ       ಕನ್ನಡ ಪುಸ್ತಕ ಓದಿ – ಬಹುಮಾನ ಗೆಲ್ಲಿ ಕಾರ್ಯಕ್ರಮಕ್ಕೆ      ಚಾಲನೆ ನೀಡಿದ ಸಂದರ್ಭದಲ್ಲಿ ಕನ್ನಡ ಜಾಗೃತ ಪರಿಷತ್ತು ಅಧ್ಯಕ್ಷ ಕೆ.ವೆಂಕಟೇಶ್, ಕಾರ್ಯದರ್ಶಿ ಡಿ.ಪಿ.ಆಂಜನೇಯಕಾರ್ಯಕಾರಿ ಸಮಿತಿಯ ಪರಮೇಶ್, ಜಿ.ಸಿ.ಶಿವಕುಮಾರ್

ಚಂದ್ರಣ್ಣಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ  ಕೆ.ಮಹಾಲಿಂಗಯ್ಯಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ  ಸಹಾಯಕ ಆಯುಕ್ತ  ವೆಂಕಟರಾಜುಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ  ಜಿ.ಸುರೇಶ್ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಎ.ಅಣ್ಣಯ್ಯ, ಇಸ್ತೂರು ರಂಗಸ್ವಾಮಯ್ಯ  ಮುಂತಾದವರು ಭಾಗವಹಿಸಿದ್ದರು.

 

Share This Article
error: Content is protected !!
";