ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾವೇರಿ ತಂತ್ರಾಂಶ – 2.0 ರಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದಾಗಿ ಕಳೆದ ಕೆಲವು ದಿನಗಳಿಂದ ನೋಂದಣಿ ಹಾಗೂ ಇತರ ಸೇವೆಗಳಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿರುತ್ತದೆ. ಅದನ್ನು ಸರಿಪಡಿಸಲಾಗಿದ್ದು, ಸಾರ್ವಜನಿಕರು ಎಂದಿನಂತೆ ನೋಂದಣಿ ಹಾಗೂ ಇತರ ಯಾವುದೇ ಅಡಚಣೆ ಇಲ್ಲದೇ ಪಡೆಯಬಹುದಾಗಿದೆ ಎಂದು ನೋಂದಣಿ ಮಹಾಪರೀವಿಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಕೆ.ಎ.ದಯಾನಂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 1, 2025 ರಂದು ಈ ತಂತ್ರಾಂಶದಲ್ಲಿ ಅಡಚಣೆ ಉಂಟಾಗಿ ಹಲವಾರು ನೋಂದಣಿ ಸ್ಥಗಿತಗೊಂಡು, ಆದಾಯ ಗಳಿಕೆಗೂ ತೊಂದರೆಯಾಗಿತ್ತು.
ಫೆಬ್ರವರಿ 1 ರಂದು 556 ನೋಂದಣಿಯಾಗಿದ್ದು, 1649 ಋಣಭಾರ ರಾಹಿತ್ಯ ಪ್ರಮಾಣಪತ್ರ ಸಹಿಯಾಗಿದ್ದು, 405 ದೃಢೀಕೃತ ಪತ್ರಗಳನ್ನು ವಿತರಿಸಲಾಗಿದ್ದು, ರೂ.15,18,72,565.45 ಆದಾಯ ಕ್ರೂಢೀಕೃತವಾಗಿದೆ. ಫೆಬ್ರವರಿ 3 ರಂದು ಪ್ರಕ್ರಿಯೆಯಲ್ಲಿ ಸುಧಾರಣೆ ಉಂಟಾಗಿ, 5243 ನೋಂದಣಿಗಳಾಗಿದ್ದು, 3525 ಋಣಭಾರ ರಾಹಿತ್ಯ ಪ್ರಮಾಣಪತ್ರ ಸಹಿಯಾಗಿದ್ದು, 652 ದೃಢೀಕೃತ ಪ್ರತಿಗಳು ವಿತರಿಸಲಾಗಿದ್ದು ರೂ 52,24,42,289.78 ಆದಾಯ ಕ್ರೂಡೀಕೃತವಾಗಿದೆ.
ಫೆಬ್ರವರಿ 4 ರಂದು ಸಹ ತಂತ್ರಾಂಶದಲ್ಲಿ ಅಡಚಣೆಯಾಗಿದ್ದರೂ ಸರಿಪಡಿಸಿ 1657 ನೋಂದಣಿಗಳಾಗಿದ್ದು, 7327 ಋಣಭಾರ ರಾಹಿತ್ಯ ಪ್ರಮಾಣಪತ್ರ ಹಾಗೂ 977 ದೃಢೀಕೃತ ಪತ್ರಗಳನ್ನು ವಿತರಿಸಲಾಗಿ ಒಟ್ಟು ರೂ.17,13,86,591.75 ಆದಾಯ ಗಳಿಕೆಯಾಗಿದೆ.
ಫೆಬ್ರವರಿ 5 ರಂದು ಸಂಜೆ 4 ಗಂಟೆಗೆ ಸುಮಾರಿಗೆ ಪ್ರಕ್ರಿಯೆ ಉತ್ತಮಗೊಂಡು 7225 ನೋಂದಣಿಗಳಾಗಿದ್ದು, 3903 ಋಣಭಾರ ರಾಹಿತ್ಯ ಪತ್ರ ವಿತರಿಸಲಾಗಿದ್ದು, 753 ದೃಢೀಕೃತ ಪ್ರತಿಗಳಿಗೆ ಸಹಿ ಹಾಕಲಾಗಿದ್ದು, ಒಟ್ಟು 62,59,69,340 ಆದಾಯ ಗಳಿಕೆಯಾಗಿದೆ.
ಕಳೆದ ಡಿಸೆಂಬರ್ 2024 ರಲ್ಲಿ ಸರಾಸರಿ 7,721 ನೋಂದಣಿಗಳಾಗಿದ್ದು, ರೂ. 62,93,54,917 ಆದಾಯ ಗಳಿಕೆಯಾಗಿತ್ತು. ಇದೀಗ ನೋಂದಣಿ ಮೊದಲಿದ್ದ ಹಂತಕ್ಕೆ ತಲುಪಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.