ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಉತ್ತರ ಪ್ರದೇಶದ ಬರೇಲಿಯ ಜಾಟ್ ರೆಜಿಮೆಂಟ್ ಸೆಂಟರ್‍ನಲ್ಲಿ ಘಟಕ ಹೆಡ್‍ಕ್ವಾರ್ಟಸ್ ಕೋಟಾದಡಿ 17.5 ರಿಂದ 21 ವರ್ಷದೊಳಗಿನವರಿಗೆ ಡಿ. 06 ರಿಂದ 16 ವರೆಗೆ ಅಗ್ನಿಪಥ್ ಯೋಜನೆಯ ಭಾಗವಾಗಿ ನೇಮಕಾತಿ ಜರುಗಲಿದೆ.
ವೀರ ನಾರಿಯರು, ಮಾಜಿ ಸೈನಿಕರ ಮಕ್ಕಳು ಹಾಗೂ ಅವಲಂಬಿತರ ಮಕ್ಕಳು 2004 ಅಕ್ಟೋಬರ್ 01 ರಿಂದ 2008 ಏಪ್ರಿಲ್ 01 ನಡುವೆ ಜನಿಸಿದ ಅರ್ಹ ಅಭ್ಯರ್ಥಿಗಳು ಅಗ್ನಿವೀರ್,
ಟ್ರೇಡ್ಸ್‍ಮನ್, ಜನರಲ್ ಡ್ಯೂಟಿ ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿಯು ಅಗ್ನಿಪಥ್ ಯೋಜನೆಯಡಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಜಾಟ್ ರೆಜಿಮೆಂಟ್ ಸೆಂಟರ್ ಬರೇಲಿ ದೂರವಾಣಿ ಸಂಖ್ಯೆ 05812-510596, 2511796/6335, ಅಥವಾ ಇಮೇಲ್ [email protected] ಗೆ ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

