ಎನ್‍ಸಿಸಿ ಬೆಟಾಲಿಯನ್‍ಗೆ ಮಾಜಿ ಸೈನಿಕರ ನೇಮಕ : ಅರ್ಜಿ ಆಹ್ವಾನ

News Desk


ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. (National cadet corps) ನಿರ್ದೇಶನಾಲಯವು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ರಾಯಚೂರು, ಮತ್ತು ಶಿವಮೊಗ್ಗದ ಎನ್.ಸಿ.ಸಿ. ಬೆಟಾಲಿಯನ್ಗಳಿಗೆ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

     ಮಾಜಿ ಸೈನಿಕರನ್ನು ಎನ್ಸಿಸಿ ಬೆಟಾಲಿಯನ್ಗಳಿಗೆ ಹೆಚ್ಚುವರಿ ಸಿಬ್ಬಂದಿಗಳಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಭೂ ಸೇನೆಯಿಂದ ಆಕ್ಟೋಬರ್ 2022 ನಂತರ ನಿವೃತ್ತರಾಗಿರುವ ಜೆ.ಸಿ. (ಸುಬೇದಾರ್ ಮತ್ತು ನಾಯಬ್ ಸುಬೇದರ್) ಹಾಗೂ ಹವಾಲ್ದಾರ್ ರ್ಯಾಂಕ್ (ಎಮ್ಎಸಿಪಿ ಹವಾಲ್ದಾರ್ಗಳನ್ನು ಪರಿಗಣಿಸುವುದಿಲ್ಲ) ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 
ಸೈನ್ಯದಲ್ಲಿ ದುರ್ನಡತೆ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.  ಆಸಕ್ತ ಮಾಜಿ ಸೈನಿಕರು 13 ಮಾರ್ಚ್ 2025 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ.

- Advertisement - 

ಹೆಚ್ಚಿನ ಮಾಹಿತಿಗಾಗಿ ಇಮೇಲ್ : : [email protected] ಸಂಪರ್ಕಿಸಬಹುದು.  ಅರ್ಜಿ ಸಲ್ಲಿಸಲು   https://nis.bisag-n.gov.in/nis/downloads-public ಜಾಲತಾಣವನ್ನು ಬಳಸಬೇಕು.    ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಕೆಎಸ್ಸಿಎಮ್ಎಫ್ ಬಿಲ್ಡಿಂಗ್, 4ನೇ ಮಹಡಿ ನಂ8 ಕನ್ನಿಂಗ್ಹ್ಯಾಮ್ ರಸ್ತೆ, ಬೆಂಗಳೂರು560001 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement - 

Share This Article
error: Content is protected !!
";