ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರ ಸ್ಥಳೀಯ ಸಂಸ್ಥೆಯ ಜೊತೆಗೆ ಪೂರ್ಣಾವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು NUML-day ಅಡಿಯಲ್ಲಿ ನೊಂದಾಯಿತ SHG ಸದಸ್ಯರಿಂದ ಆಸಕ್ತಿಯ ಅಭಿವ್ಯಕ್ತಿಯನ್ನು ಆಹ್ವಾನಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ವೇತನಕ್ಕೆ ಸಂಬಂಧಿಸಿದ ವಿವರ www.holalkeretown.mrc.gov.in ನಲ್ಲಿ ವೀಕ್ಷಿಸಬಹುದು. NUML-day ನೊಂದಿಗೆ ನೊಂದಾಯಿಸಿಕೊAಡ ಆಸಕ್ತ ಸದಸ್ಯರು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು NUML-day ಯ ಹಿಂಬರಹದೊಂದಿಗೆ ಅಕ್ಟೋಬರ್ 5ರ ಸಂಜೆ 5 ಗಂಟೆಯೊಳಗೆ ಕಚೇರಿಯ ಅಧಿಕೃತ ಇಮೇಲ್ [email protected] ಗೆ ಕಳುಹಿಸಲು ತಿಳಿಸಲಾಗಿದೆ.
ಆಸಕ್ತಿಯುಳ್ಳ SHG ಸದಸ್ಯರು ಗುರುತಿನ ಪುರಾವೆ, ವಿಳಾಸದ ಪುರಾವೆ, ಅರ್ಹಾತಾ ಪಟ್ಟಿಯಲ್ಲಿ ನೊಂದಾಯಿಸಕೊಂಡಿರುವುದಕ್ಕೆ (ಎಂಪಾನೆಲ್) ದಾಖಲೆಗಳು, ಶೈಕ್ಷಣಿಕ ಅರ್ಹತೆ, NUML-day ನಿಂದ ಹಿಂಬರಹ ನಮೂನೆಯ ದಾಖಲೆಗಳನ್ನು ಸಲ್ಲುಸಬೇಕು.
ಆಯ್ಕೆಯಾದ ಅಭ್ಯರ್ಥಿಗಳನ್ನು ಈ ವಿಷಯದ ಕುರಿತು ಅವರ ತಿಳುವಳುಕೆಗಳನ್ನು ನಿರ್ಣಯಿಸಲು ಅ.7ರಂದು ಸಂದರ್ಶನಕ್ಕೆ ಕರೆಯಲಾಗುವುದು ಎಂದು ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.