ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ ಜಿ ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ KHPT, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ICMR, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಶಾ ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಒಂದು ದಿನದ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಕಾರ್ಯಗಾರ ಏರ್ಪಡಿಸಲಾಗಿದ್ದು
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಮೊದಲನೆ ಹಂತದ ತರಬೇತಿ ಕಾರ್ಯಕ್ರಮ ಇದಾಗಿದೆ ಕಾರ್ಯಕ್ರಮಕ್ಕೆ ಬಿಜಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭೂಮಿಕಾ ಚಾಲನೆ ನೀಡಿದರು.
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ( KHPT)ಹಿರಿಯ ವ್ಯವಸ್ಥಾಪಕ ಡಾ. ಆಯೇಷಾ, ತಾಲೂಕು ಆಶಾ ಮೆಂಟರ್ ರಾಧಾ, ತಾಲೂಕು ಆರೋಗ್ಯ ಕಚೇರಿ ಸಿಬ್ಬಂದಿ ಮಾರುತಮ್ಮ, ತಾಲ್ಲೂಕು ಸಂಯೋಜಕ ಮೇಘ ಹಾಗೂ ತರಬೇತುದಾರ ಗುರುಪ್ರಸಾದ್ SP, ಚಿಕ್ಕಣ್ಣ, ಗೋವಿಂದರಾಜ್, ತಾಲ್ಲೂಕು ನರ್ಸ್ ಮೆಂಟರ್ ಉಮಾಪತಿ.ಆರ್ ಅವರು ಭಾಗವಹಿಸಿದ್ದರು.
ಚಾಲನೆ ನೀಡಿದ ಡಾ.ಭೂಮಿಕಾ ಮಾತನಾಡಿ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡುವಲ್ಲಿ ನಾವೆಲ್ಲರೂ ಸಮುದಾಯ ಮಟ್ಟದಲ್ಲಿ ಕೈಜೋಡಿಸಿ ಕಾರ್ಯನಿರ್ವಹಿಸಬೇಕಾಗಿದೆ ಆಗ ಮಾತ್ರ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಿ ಆರೋಗ್ಯವಂತ ಸಮುದಾಯ ಹಾಗೂ ಸಮಾಜ ನಿರ್ಮಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ನ (KHPT)ಹಿರಿಯ ವ್ಯವಸ್ಥಾಪಕಿ ಡಾ.ಆಯೇಷಾ ಮಾತನಾಡಿ ಒಬ್ಬ ಗರ್ಭಿಣಿಯ ಪೂರ್ಣ ಅವಧಿ ಸಾವಿರ ದಿನಗಳು ಈ ಸಾವಿರ ದಿನಗಳು ಗರ್ಭಿಣಿಯಾದಾಗ ನಿಂದ ಹಿಡಿದು ಮಗುವಿನ ಎರಡು ವರ್ಷದ ವರೆಗೆ ಕೂಡಿದ್ದು ಅಲ್ಲಿಯವರೆಗೆ
ಗರ್ಭಿಣಿಯ ಹಾರೈಕೆ ಮಗುವಿನ ಹಾರೈಕೆ ಕಾಂಗರು ಮದರ್ ಕೇರ್ ಮನೆ ಮಟ್ಟದಲ್ಲಿ ನವಜಾತ ಶಿಶುವಿನ ಹಾರೈಕೆ, ಎದೆ ಹಾಲಿನ ಮಹತ್ವ, ಪೌಷ್ಟಿಕ ಆಹಾರ, ಹೆರಿಗೆಯ ಸಿದ್ಧತೆ ಸಮುದಾಯ ಮಟ್ಟದಲ್ಲಿ ನಾವೆಲ್ಲರೂ ತಮ್ಮ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದರ ಮೂಲಕ ಆರೋಗ್ಯವಂತ ತಾಯಿ ಮತ್ತು ಮಗುವನ್ನು ಪಡೆಯುವುದರ ಜೊತೆಗೆ ತಾಯಿ ಮರಣ ಮತ್ತು ಶಿಶುಮರಣ ಕಡಿಮೆ ಮಾಡಿ ಉತ್ತಮ ಸಮಾಜ ನಿರ್ಮಿಸೋಣ ಜೊತೆಗೆ ಮಾದರಿ ಜಿಲ್ಲೆಯನ್ನಾಗಿ ಮಾಡೋಣ ಎಂದು ತಿಳಿಸಿದರು.

