ಸಾವಿನ ಮನೆಯಲ್ಲಿ ಹೆಣದ ಜೊತೆಯೂ ರೀಲ್ಸ್

khushihost

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಮೊಬೈಲ್ ಕೈಯಲ್ಲಿ ಇದ್ದರೇ ಸಾಕು ಕೆಲವರು ಪ್ರಪಂಚವನ್ನೇ ಮರೆಯುತ್ತಾರೆ. ಕೆಲವರಂತೂ ಮೊಬೈಲ್ ಸಿಕ್ಕರೇ ಸಾಕು ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಹುಚ್ಚು. ಸ್ಥಳ, ಸಂದರ್ಭ ಏನೇ ಇರಲಿ ಅದನ್ನ ನೋಡದೆ ಎಲ್ಲೆಂದರಲ್ಲಿ ರೀಲ್ಸ್ ಮಾಡುವ ಜನರೂ ಇದ್ದಾರೆ.

ಅಂತೆಯೇ ಇಲ್ಲೊಬ್ಬ ಆಸಾಮಿ ಸಾವಿನ ಮನಯಲ್ಲೂ ಹೆಣದ ಜೊತೆಯೇ ರೀಲ್ಸ್ ಮಾಡಿ ಸಖತ್ ಟ್ರೋಲ್ ಆಗಿದ್ದಾನೆ. ಈ ದೃಶ್ಯವನ್ನು ಕಂಡು ಎಂಥಾ ಕಾಲ ಬಂತಪ್ಪಾ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದ್ರೆ ಕೆಲವರು ತಮ್ಮ ಪ್ರಾಣದ ಜೊತೆಗೆಯೇ ಚೆಲ್ಲಾಟವಾಡಿದ್ರೆ ಇನ್ನೂ ಕೆಲವರು ರೈಲು, ಮೆಟ್ರೋ ಇತ್ಯಾದಿ ಸಾರ್ವಜನಿಕ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ರೀಲ್ಸ್ ಮಾಡಲು ಹೋಗಿ ಕೆಲವರು ತಮ್ಮ ಪ್ರಾಣ ಕಳೆದುಕೊಂಡ ಉದಹಾರಣಗೆಳೂ ಇವೆ.

ಆದ್ರೆ ಇಲ್ಲೊಬ್ಬ ಆಸಾಮಿ ಸಾವಿನ ಮನೆಯಲ್ಲಿ ಹೆಣದ ಜೊತೆಗೆಯೇ ರೀಲ್ಸ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇನ್ನೂ ಈ ಕಣ್ಣಲ್ಲಿ ಎಂಥೆತಾ ಅವತಾರಗಳನ್ನು ನೋಡ ಬೇಕಿದ್ಯೋ ದೇವ್ರೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಯಾರಾದರೂ ತೀರಿ ಹೋದ್ರೆ, ಆ ಸಾವಿನ ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿರುತ್ತದೆ. ಎಲ್ಲರ ಕಣ್ಣಲ್ಲೂ ಕಣ್ಣೀರು ತುಂಬಿರುತ್ತದೆ. ಆದ್ರೆ ಇಲ್ಲೊಬ್ಬ ಆಸಾಮಿ ಸಾವಿನ ಮನೆಯಲ್ಲಿಯೂ ರೀಲ್ಸ್ ಮಾಡಿದ್ದಾನೆ. ಈ ಕುರಿತ ವಿಡಿಯೋವನ್ನು ಸಂಜಯ್ ತ್ರಿಪಾಠಿ ಎಂಬವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೆಣದ ಜೊತೆ ಕೂಡಾ ರೀಲ್ಸ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಲ್ಲರೂ ಹೆಣದ ಮುಂದೆ ಕೂತೂ ಜೋರಾಗಿ ಅಳುತ್ತಿದ್ದರೆ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆ ಹೆಣದ ಮುಂದೆ ಅಳುತ್ತಾ ಎಮೋಷನಲ್ ರೀಲ್ಸ್ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಸೆಪ್ಟೆಂಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಅತ್ಯಂತ ನಾಚಿಕೆಗೇಡಿನ ದೃಶ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮನುಷ್ಯರಲ್ಲಿ ಮಾನವೀಯತೆ ಮತ್ತು ಸೂಕ್ಷ್ಮತೆ ಮರೆಯಾಗುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಲ್ಲಾ ಈ ಮನುಷ್ಯನಿಗೆ ಎಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುವುದೇ ಗೊತ್ತಿಲ್ಲವೇʼ ಎಂದು ಕಿಡಿ ಕಾರಿದ್ದಾರೆ.

- Advertisement -  - Advertisement - 
Share This Article
error: Content is protected !!
";