ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಜನತಾ ಪಾರ್ಟಿಯು ರಾಷ್ಟ್ರದ ರಾಜಧಾನಿ ದೆಹಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ರಾಜಕೀಯ ಶಕ್ತಿ ಕೊಡುವ ಮೂಲಕ ಸ್ತ್ರೀ ಕುಲದ ಬಗೆಗಿನ ತನ್ನ ಬದ್ಧತೆಯನ್ನು ಎತ್ತಿ ಹಿಡಿದಿದೆ. ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀಮತಿ ರೇಖಾ ಗುಪ್ತ ಅವರಿಗೆ ಆತ್ಮೀಯ ಅಭಿನಂದನೆಗಳು.
ಮಾನ್ಯ ರೇಖಾ ಗುಪ್ತ ಅವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಪ್ರೇರಣೆ ಹಾಗೂ ಮಾರ್ಗದರ್ಶನ ಪಡೆದು ದೆಹಲಿಯ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ತೊಡಲಿ.
ಜನತೆಗೆ ಪಕ್ಷ ನೀಡಿರುವ ಪ್ರಣಾಳಿಕೆಯ ಅಂಶಗಳನ್ನು ಜರೂರಾಗಿ ಜಾರಿಗೆ ತರುವಂತಾಗಲಿ, ಭಾರತದ ಹೆಗ್ಗುರುತಾಗಿರುವ ದೆಹಲಿ ಆಡಳಿತದ ಕ್ರಿಯಾಶೀಲತೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಾದರಿಯಾಗಿರಲಿ ಎಂದು ವಿಜಯೇಂದ್ರ ಹಾರೈಸಿದ್ದಾರೆ.

