ಇಂದು ಕಾಡು ಕಾಯುವ ಮರ ಕಥಾ ಸಂಕಲನ ಬಿಡುಗಡೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಡೇಕುಂಟೆ ಮಂಜುನಾಥ್ ಅವರ ಕಾಡು ಕಾಯುವ ಮರ ಕಥಾ ಸಂಕಲನ ಆಗಸ್ಟ್-3 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ಕಾರ್ಯನಿರತ ಪತ್ರಕರ್ತರ ಸಂಘದ ಅಂಬೇಡ್ಕರ್ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ.

ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಡಾ.ಬಿ.ಆರ್. ರವಿಕಾಂತೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಖ್ಯಾತ ಲೇಖಕ ಜಿ.ಎನ್. ಮೋಹನ್ ಷುಸ್ತಕ ಬಿಡಃಗಡೆ ಮಾಡುವರು. ಪುಸ್ತಕ ಕುರಿತು ಶಿವಮೊಗ್ಗದ ಉಪನ್ಯಾಸಕಿ ಹಾಗೂ ಬರಹಗಾರ್ತಿ ಪಿ. ಭಾರತೀದೇವಿ ಮಾತನಾಡುವರು.

- Advertisement - 

ಗಂಡು ಮೆಟ್ಟಿದ ನಾಡು, ಕಲ್ಲಿನ ಕೋಟೆಯ ಸಾಹಿತಿ, ಹಿರಿಯ ಪತ್ರಕರ್ತರು, ಸಂಘಟನೆಗಳ ಅನೇಕ ಹೋರಾಟಗಳಲ್ಲಿ ಗುರುತಿಸಿಕೊಂಡು ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದ ಮಂಜುನಾಥ್‌ ಅವರ ಕೃತಿ ʼಕಾಡು ಕಾಯುವ ಮರʼ ಕಥಾ ಸಂಕಲನ ಲೋಕಾರ್ಪಣೆ ಆಗಲಿದೆ.

ಈ ಮಹತ್ವದ ಕಾರ್ಯಕ್ರಮವನ್ನು ಕಾರ್ಯನಿರತ ಪತ್ರಕರ್ತರ ಸಂಘ, ಲಂಕೇಶ್‌ ವಿಚಾರ ವೇದಿಕೆ, ಅಂಬೇಡ್ಕರ್‌ ವಿಚಾರ ವೇದಿಕೆ, ಮೈತ್ರಿ ಪುಸ್ತಕ ಮನೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

- Advertisement - 

ವಿಶೇಷ ಆಹ್ವಾನಿತರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಅಂತರಾಷ್ಟ್ರೀಯ ಚಿತ್ರಬರಹಗಾರ ಗುಜ್ಜಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಮಾಧ್ಯಮ ಆಕಾಡೆಮಿ ಸದಸ್ಯರು ಹಾಗೂ ಪತ್ರಕರ್ತರಾದ ಎಂ.ಎನ್. ಅಹೋಬಳಪತಿ, ಉಪನ್ಯಾಸಕ ಆರ್. ಮಂಜುನಾಥ್ದಿನೇಶ್ ಗೌಡಗೆರೆ ಅಧ್ಯಕ್ಷತೆ ವಹಿಸುವರು.

 

Share This Article
error: Content is protected !!
";