ಶಿವಮೂರ್ತಿ ಮುರುಘಾ ಶರಣರಿಗೆ ಬಿಡುಗಡೆ ಭಾಗ್ಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪೋಕ್ಸೋ ಪ್ರಕರಣದ ಆರೋಪಿ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ (ಮುರುಘಾ ಶ್ರೀ) ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯವು 2024ರ ಅಕ್ಟೋಬರ್-7 ರಂದು ಸೋಮವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಚಿತ್ರದುರ್ಗದ ಕಾರಾಗೃಹದಿಂದ ಮುರುಘಾ ಶರಣರು ಬಿಡುಗಡೆಯಾದ ತಕ್ಷಣ ದಾವಣಗೆರೆಯ ವಿರಕ್ತಮಠಕ್ಕೆ ತೆರಳುವರು ಎನ್ನಲಾಗಿದೆ. ಪೋಕ್ಸೋ ಕಾಯ್ದೆ ಅಡಿ ಮುರುಘಾ ಶರಣರನ್ನು ಬಂಧಿಸಲಾಗಿದ್ದು ಇಬ್ಬರು ಬಾಲಕಿಯರ ವಿಚಾರಣೆ ನಂತರ ಚಿತ್ರದುರ್ಗ ನ್ಯಾಯಾಲಯವು ಮುರುಘಾ ಶರಣರಿಗೆ ಜಾಮೀನು ನೀಡಲಾಗಿದೆ.

ಏನಿದು ಪ್ರಕರಣ?
ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 2022 ಆಗಸ್ಟ್‌ರಂದು ದಾಖಲಾಗಿತ್ತು.

2022ರ ಸೆಪ್ಟೆಂಬರ್‌-1ರಂದು ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಇಲ್ಲಿಂದ 14 ತಿಂಗಳ ಕಾಲ ಜೈಲಿನಲ್ಲಿದ್ದ ಮುರುಘಾ ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದು ಮಾಡಿ ಆದೇಶಿಸಿತ್ತು. ಇದಾದ ನಂತರ ಮತ್ತೆ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ಚಿತ್ರದುರ್ಗದ ಜೈಲಿನಲ್ಲಿ ಇರಿಸಿದ್ದರು.

ಇದಕ್ಕೂ ಮೊದಲು ಬಾಲಕಿಯರ ಮೇಲೆ ಲೈಗಿಂಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಚಿತ್ರದುರ್ಗದ ಮುರುಘಾಶ್ರೀ ಬಂಧನ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ಮೂಲಕ ಮತ್ತಷ್ಟು ದಿನ ಸ್ವಾಮೀಜಿಗಳು ಜೈಲಿಗೆ ಹೋಗುವುದು ತಪ್ಪಿತ್ತು.

ನಾಲ್ಕು ದಿನಗಳ ಹಿಂದಷ್ಟೇ ಮೊದಲ ಫೋಕ್ಸೊ ಪ್ರಕರಣದಡಿ ಜಾಮೀನು ಮಂಜೂರಾಗಿತ್ತು. ಎರಡನೇ ಪ್ರಕರಣದ ವಾರಂಟ್‌ಗೆ ಸಂಬಂಧಿಸಿದ ವಿಚಾರಣೆ ನವೆಂಬರ್‌(ಸೋಮವಾರ) ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಯಿತು.

ಈ ಸಂದರ್ಭದಲ್ಲಿ ಮುರುಘಾ ಶರಣರಿಗೆ ಎರಡನೇ ಪೋಕ್ಸೊ ಪ್ರಕರಣದಲ್ಲಿ ಡಿಸೆಂಬರ್‌ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಈ ಬೆನ್ನಲ್ಲೆ ಸೋಮವಾರ ಮಧ್ಯಾಹ್ನ ದಾವಣಗೆರೆಯಲ್ಲಿದ್ದ ಶ್ರೀಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ಸಂಜೆ ಬಳಿಕ ಕರ್ನಾಟಕ ಹೈಕೋರ್ಟ್‌ಕೆಳ ಹಂತದ ನ್ಯಾಯಾಲಯ ನೀಡಿದ ಬಂಧನ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.

ಚಿತ್ರದುರ್ಗಕ್ಕೆ ನಿರ್ಬಂಧ-
ಮುರುಘಾ ಶರಣರಿಗೆ ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದರು. 14 ತಿಂಗಳ ಸೆರೆವಾಸ ಬಳಿಕ ಬಿಡುಗಡೆ ಮಾಡಲಾಗಿತ್ತು.

ಹೈಕೋರ್ಟ್‌ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ರದ್ದು ಮಾಡಿದ್ದರಿಂದಾಗಿ  ಮತ್ತೆ ಸ್ವಾಮೀಜಿ ಜೈಲು ಸೇರಿದ್ದರು. ತಿಂಗಳುಗಳ ಹಿಂದೆ ಸ್ವಾಮೀಜಿಗಳಿಗೆ ಕರ್ನಾಟಕ ಹೈಕೋರ್ಟ್‌ಹಲವು ಷರತ್ತುಗಳೊಂದಿಗೆ ಜಾಮೀನು ನೀಡಿತ್ತು. ಬಳಿಕ ಅರ್ಜಿದಾರರು ಆರೋಪಿ ಬಂಧನದಿಂದ ಹೊರಗಿದ್ದು, ಸಾಕ್ಷಿ ನಾಶಪಡಿಸಬಹುದು ಎಂದು ಸುಪ್ರೀಂ ಕೋರ್ಟ್‌ಮೊರೆ ಹೋಗಿದ್ದರು.

ಪ್ರಕರಣ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಪುನಃ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಆದೇಶ ನೀಡಿತ್ತು.

ಸುಪ್ರೀಂ ಕೋರ್ಟ್‌ಆದೇಶದಂತೆ, ಮುರುಘಾ ಶ್ರೀಗಳನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯರು ಹಾಗೂ ಪೋಷಕರ ವಿಚಾರಣೆಗೆ ಮುಗಿಸುವವರೆಗೂ ಶ್ರೀಗಳು ಬಂಧನದಲ್ಲಿರಬೇಕು. ಮುಂದಿನ 4 ತಿಂಗಳಲ್ಲಿ ತನಿಖಾ ಸಂಸ್ಥೆ ಅವರ ವಿಚಾರಣೆ ಮುಗಿಸಬೇಕು.

ಒಂದು ವೇಳೆ ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಯದ್ದಿದ್ದರೆ ಇನ್ನು 2 ತಿಂಗಳ ಕಾಲ ಸ್ವಾಮೀಜಿಯ ಬಂಧನ ಅವಧಿಯನ್ನು ವಿಸ್ತರಣೆ ಮಾಡಬಹುದು ಎಂದು ಈ ಎಂದು ಸುಪ್ರೀಂ ಕೋರ್ಟ್‌ಸೂಚನೆ ನೀಡಿತ್ತು.

 

 

 

- Advertisement -  - Advertisement -  - Advertisement - 
Share This Article
error: Content is protected !!
";