ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೊಗಳೆ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕಳೆದ 22 ತಿಂಗಳಲ್ಲಿ ರೈತರ ಹೆಸರಲ್ಲಿ 3 ಬಾರಿ ನಂದಿನ ಹಾಲಿನ ದರ ಏರಿಸಿದೆ. ಆದರೆ, 468 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಕೊಡದೇ ಹಾಲು ಉತ್ಪಾದಕರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಒಂದ್ಕಡೆ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ, ಮತ್ತೊಂದು ಕಡೆ ರೈತರ ಪ್ರೋತ್ಸಾಹ ಧನಕ್ಕೂ ಕತ್ತರಿ ಹಾಕಿದೆ. ಬಾಕಿ ಹಣ ಪಾವತಿಸುವಂತೆ ಬಳ್ಳಾರಿಯಲ್ಲಿ ಕೆಎಂಎಫ್‌ಅಧ್ಯಕ್ಷರಿಗೆ ಮುತ್ತಿಗೆ ಹಾಕಿ ರೈತರು, ಕಾಂಗ್ರೆಸ್‌ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಾನ್ಯ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರೇ, ಕರ್ನಾಟಕದ ರೈತರು ಬದುಕ ಬೇಕಲ್ಲವೇ ? ನಿಮಗೆ ಕಾಳಜಿ ಇದ್ದರೆ, ಮೊದಲು ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.