ಫೆ.1 ರಂದು ಎಂಜಿ ರಂಗಸ್ವಾಮಿ ಅವರ 5 ಕೃತಿಗಳ ಬಿಡುಗಡೆ ಸಮಾರಂಭ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿವಿಜಿ ಪಬ್ಲಿಕೇಶನ್ಸ್ ಬೆಂಗಳೂರು, ತೇಜಸ್ ಇಂಡಿಯಾ ಬೆಂಗಳೂರು,            ಬಾಪೂಜಿ ಸಮೂಹ ವಿದ್ಯಾ ಸಂಸ್ಥೆ ಚಿತ್ರದುರ್ಗ, ಅಭಿರುಚಿ- ಸಾಂಸ್ಕೃತಿಕ ವೇದಿಕೆ, ಚಿತ್ರದುರ್ಗ ಇವರ ಆಶ್ರಯದಲ್ಲಿ ಫೆಬ್ರವರಿ-01ರ ಶನಿವಾರ ಸಂಜೆ 5.30 ಗಂಟೆಗೆ ಚಿತ್ರದುರ್ಗದ ಐಎಂಎ ಹಾಲ್ ನಲ್ಲಿ ಸಾಹಿತಿ ಪ್ರೊ.ಎಂ.ಜಿ. ರಂಗಸ್ವಾಮಿ ಅವರ ಮಹತ್ವದ ಕೃತಿಗಳಾದ 1.’ಡಾಬ್ಸ್ ಆಡಳಿತದ ನೋಟಗಳು‘,   

       2.’ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್‘(6ನೇ ಮುದ್ರಣ), 3.ದುರುಗ ಸೀಮೆ ಸಾಧಕರು (ವ್ಯಕ್ತಿ ಚಿತ್ರಗಳು), 4.ಹಿರಿಯೂರು ಸೀಮೆ ಜನಪದ ದೈವಗಳು‘,            5.’ಮಾರಿಕಣಿವೆ ಮಡಿಲಲ್ಲಿ (ಬಿಡಿ ಲೇಖನಗಳು) ಎಂಬ ಕೃತಿಗಳು ಬಿಡುಗಡೆ ಆಗಲಿವೆ.

- Advertisement - 

ಅಧ್ಯಕ್ಷತೆ: ಡಾ. ಮೀರಾಸಾಬಿಹಳ್ಳಿ ಶಿವಣ್ಣ ಜಾನಪದ ವಿದ್ವಾಂಸರು, ಬೆಂಗಳೂರು.              ಉದ್ಘಾಟನೆ:  ಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ, ಚಿತ್ರದುರ್ಗ.   

                 ಪುಸ್ತಕ ಬಿಡುಗಡೆ: ಪ್ರೊ. ಲಕ್ಷ್ಮಣ್ ತೆಲಗಾವಿ, ಇತಿಹಾಸ ಸಂಶೋಧಕರು, ಧಾರವಾಡ. ಮುಖ್ಯ ಅತಿಥಿಗಳು: ಡಾ.ಕೆ.ಎಂ. ವೀರೇಶ್ ಅಧ್ಯಕ್ಷರು, ಬಾಪೂಜಿ ಸಮೂಹ ವಿದ್ಯಾ ಸಂಸ್ಥೆ, ಚಿತ್ರದುರ್ಗ, ಡಾ.ದೊಡ್ಡ ಮಲ್ಲಯ್ಯ ಸಾಹಿತಿ, ಚಿತ್ರದುರ್ಗ, ಪ್ರೊ.ಹೆಚ್. ಲಿಂಗಪ್ಪ ಲೇಖಕರು, ಚಿತ್ರದುರ್ಗ.

- Advertisement - 

ಗೌರವ ಉಪಸ್ಥಿತಿ: ಸಿವಿಜಿ ಚಂದ್ರು ಬೆಂಗಳೂರು, ಪ್ರೊ. ಎಂ.ಜಿ. ರಂಗಸ್ವಾಮಿ ಹಿರಿಯೂರು.
ಇದೇ ಸಂದರ್ಭದಲ್ಲಿ ಸಿವಿಜಿ ಪಬ್ಲಿಕೇಶನ್ಸ್ ಪ್ರಕಟಿಸಿರುವ ಚಿತ್ರದುರ್ಗ ಜಿಲ್ಲಾ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";