ಹಿರಿಯೂರಿನ ಪ್ರೊ.ಎಂ.ಜಿ.ರಂಗಸ್ವಾಮಿಯವರ ಐದು ಕೃತಿಗಳ ಬಿಡುಗಡೆ ಇಂದು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳೆದ ಐದು ವರ್ಷಗಳ ಹಿಂದೆ ಬೆಳಗಿನ ವೇಳೆಯಲ್ಲಿ ಹಿರಿಯೂರಿನಿಂದ ಧರ್ಮಪುರ ಹೋಗುವ ಬಸ್ಸಲ್ಲಿ ಯಾರಾದರೂ ಪುಸ್ತಕವೊಂದನ್ನು ಹಿಡಿದುಕೊಂಡು ಓದುತ್ತಿದ್ದಾರೆ ಎಂದರೆ ಅವರು ರಂಗಸ್ವಾಮಿಯೆಂದು ಸ್ಪಷ್ಟವಾಗಿ ಗುರುತಿಸಬಹುದಿತ್ತು. ಚಿತ್ರದುರ್ಗದಂತ ಬಯಲುಸೀಮೆಯ ಸಾಂಸ್ಕೃತಿಕ ಶೋಧದ ಬಗೆಗೆ ಆಸ್ಥೆ ಬೆಳೆಸಿಕೊಂಡಿರುವ ವಿರಾಳತೀತಾ ಪ್ರತಿಭೆಗಳಲ್ಲಿ ರಂಗಸ್ವಾಮಿ ಸಹ ಒಬ್ಬರಾಗಿದ್ದಾರೆ.

ಡಾ.ಲಕ್ಷ್ಮಣ್ ತೆಲಗಾವಿ, ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಅಂಜಿನಪ್ಪ ರಂತಹ ಸಾಂಗತ್ಯ ಸಿಕ್ಕಾಗಲಂತೂ ಅವರರೊಳಗೆ ಹುದುಗಿದ್ದ ಸಾಹಿತತ್ವ ಜಾಗೃತಗೊಂಡಿತು. ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಒಂದಷ್ಟು ಬರವಣಿಗೆ ಮಾಡಿಕೊಂಡಿದ್ದ ರಂಗಸ್ವಾಮಿಯವರು ಅವುಗಳಿಗೆ ಪುಸ್ತಕ ರೂಪು ನೀಡುವ ಪ್ರಯತ್ನ ಮಾಡಿದ್ದು, ಕರೋನ ಕಾಲದಲ್ಲಿ ಎಂಬುದು  ವಿಶೇಷವಾಗಿದೆ ಪ್ರೊ ರಂಗಸ್ವಾಮಿಯವರೆ ನನ್ನೊಡನೆ ಮಾತನಾಡುವಾಗ ಕರೋನ ಜಗತ್ತಿಗೆ ಕತ್ತಲಾಗಿ ಪರಿಣಮಿಸಿದರೆ ನನ್ನ  ಪಾಲಿಗೆ ಬೆಳಕಾಗಿ ರೂಪುಗೊಂಡಿತ್ತು ಎಂದಿದ್ದನ್ನು ನೆನಪಿಸಿಕೊಳ್ಳಬಹುದು. ಕೊರೆತಗಳ ನಡೆವೆಯೂ ಅವಕಾಶಗಳನ್ನು ಹೇಗೆ ಕಂಡುಕೊಳ್ಳಬೇಕೆಂಬುದಕ್ಕೆ ಇವರು ಉದಾಹರಣೆಯಾಗಿ ನಿಲ್ಲುತ್ತಾರೆ.

ಹಿರಿಯೂರು ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದರು ಕಳೆದ ದಶಕದವರೆಗೆ ಮಾಹಿತಿಗಳ ದಾಖಲೀಕರಣದ ಹಿನ್ನಲೆಯಲ್ಲಿ ತುಂಬಾ ಹಿಂದುಳಿದಿದೆ. ಎಂ.ಜಿ.ಆರ್, ಉಜ್ಜಿನಪ್ಪ, ಕರಿಯಪ್ಪ ಮಾಳಿಗೆ, ಲಕ್ಷ್ಮಣ್ ತೆಲಗಾವಿಯವರು ಆ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಂಗಸ್ವಾಮಿಯವರು ಮೊದಲಿಗೆ ಹಿರಿಯೂರು ಸೀಮೆಯ ಜಾನಪದ ಎಂಬ ಪುಸ್ತಕವನ್ನು ಪ್ರಕಟಿಸಿದರು. ಇದು ಪೂರ್ಣವಾಗಿ ಕ್ಷೇತ್ರಾಧಾರಿತವಾಗಿದ್ದು ಗ್ರಾಮವೊಂದರ ಐತಿಹ್ಯ, ಆಚರಣೆಗಳು, ನಂಬಿಕೆಗಳು, ದೈವರಾಧನೆ, ಸಾಂಸ್ಕೃತಿಕ ವೀರರು, ಬುಡಕಟ್ಟುಗಳನ್ನು ಶೋಧನಾತ್ಮಕ ನೆಲೆಯಲ್ಲಿ ಪರಿಭಾವಿಸುವ ಪ್ರಯತ್ನ ಮಾಡಿತು.

ಎಂ.ಜಿ.ಆರ್. ರವರ ಎರಡನೇ ಪುಸ್ತಕ ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್. ಇದು A Journey From Madras Through The Countries of Mysore ಪುಸ್ತಕದಲ್ಲಿ ಪುಸ್ತಕದ ಅನುವಾದವಾಗಿದೆ. ಅವಿಭಿಜಿತ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬುಕಾನ್‌ನ ಪ್ರವಾಸದ ಅನುಭವಗಳನ್ನು ಇದು ದಾಖಲಿಸುತ್ತದೆ. ಎಂ.ಜಿ.ಆರ್ ರವರಿಗೆ ಉತ್ತಮ ಹೆಸರನ್ನು ತಂದುಕೊಟ್ಟಂತಹ ಕೃತಿಯಾಗಿದೆ. ಎಂ.ಜಿ.ಆರ್ ರವರ ಬರವಣಗೆಯ ವೈಶಿಷ್ಟ್ಯವೆಂದರೆ ಸಂಕೀರ್ಣತೆಯನ್ನು ಸರಳೀಕರಣದ ಪ್ರಕ್ರಿಯೆಗೆ ಒಳಪಡಿಸುವುದು ಅದು ಅವರ ಬರಹದ ಸ್ಥಾಯಿಯಾಗಿದೆ. ರಂಗಸ್ವಾಮಿಯವರು ಇದೇ ಉತ್ಸಾಹದಲ್ಲಿ ತುಮಕೂರು ಜಿಲ್ಲೆಯಲ್ಲಿ ಬುಕಾನ್‌ನ ಎಂಬ ಪುಸ್ತಕವನ್ನು ಸಹ ಹೊರತಂದಿದ್ದಾರೆ. ಇವು ಇತಿಹಾಸ ಆಸಕ್ತರಿಗೆ ಪ್ರಮುಖ ಆಕರಗಳಾಗಿವೆ.

ಮಾರಿಕಣಿವೆ ಜಲಾಶಯ ಚಿತ್ರದುರ್ಗದ ಪ್ರಮುಖ ಪ್ರವಾಸಿ ತಾಣವಾಗಿದೆ. ಆದರ ನಿರ್ಮಾಣ ಐತಿಹಾಸಿಕವಾಗಿ ಅದರ ಮಹತ್ವವನ್ನು ವಿವರಿಸುವಂತಹ ಕೃತಿಯ ಅಲಭ್ಯತೆ ಬಹುದೊಡ್ಡ ವಿರಾಮವನ್ನು ಒದಗಿಸಿತ್ತು. ಮಾರಿಕಣಿವೆ ಎಂಬ ಪುಸ್ತಕದ ಮೂಲಕ ಅದನ್ನು ತುಂಬುವ ಕೆಲಸ ಮಾಡಿದ್ದಾರೆ.

ಚಿತ್ರದುರ್ಗದ ನೆಲ ಕಥನವನ್ನು ವಿಶ್ಲೇಷಿಸುವಲ್ಲಿ ಭರವಸೆ ಮೂಡಿಸಿರುವ ಶ್ರೀಯುತ ರಂಗಸ್ವಾಮಿಯವರು ಇಂದು ತಮ್ಮ ಅನೇಕ ಸಾಹಿತ್ಯ ಕೃಷಿಯ ಆರಂಭ ದಿನದಿಂದ ಹಾಗೂ ಇತ್ತೀಚಿಗೆ ಬರೆದ ಲೇಖನಗಳನ್ನು ಒಟ್ಟುಗೂಡಿಸಿ ಹಾಗೂ ಡಾಬ್ಸ್-ಆಡಳಿತ ನೋಟಗಳು, ದುರುಗ ಸೀಮೆಯ ಸಾಧಕರು, ಹಿರಿಯೂರು ಸೀಮೆ ಜನಪದ ದೈವಗಳು, ಮಾರಿಕಣಿಗೆಯ ಮಡಿಲಲ್ಲಿ ಹಾಗೂ ಆರನೆ ಮುದ್ರಣ ಕಾಣುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನ್‌ನ ಪುಸ್ತಕಗಳನ್ನು ಐ.ಎಂ.ಎ ಹಾಲ್‌ನಲ್ಲಿ ಖ್ಯಾತ ಸಂಶೋಧಕರಾದ ಡಾ.ಲಕ್ಷ್ಮಣ್ ತೆಲಗಾವಿಯವರು ಇಂದು ಬಿಡುಗಡೆಗೊಳಿಸಲಿದ್ದಾರೆ.
ಲೇಖನ: ಡಾ.ಮಹೇಶ್ ಕುಂಚಿಗನಾಳು, ಉಪನ್ಯಾಸಕ, ಸರ್ಕಾರಿ ಪದವಿ ಪೂರ್ವ ಕಾಲೇಜು
, ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ.

 

Share This Article
error: Content is protected !!
";