ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠ ರವರ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠದ ಅಧ್ಯಕ್ಷರಾದ ಶ್ರೀ ನಿಶ್ಚಲನಿರಂಜನ ದೇಶೀಕೇಂದ್ರ ಮಹಾಸ್ವಾಮಿಗಳು, ಮಾನ್ಯ ಗೌರವಾನ್ವಿತ ಉಪಲೋಕಾಯುಕ್ತ
ವೀರಪ್ಪನವರು, ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಬಸವರಾಜು ರವರು , ಅಪರ ಪೋಲೀಸ್ ವರಿಷ್ಠಾಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ,ಶ್ರೀ ಕೆ.ಎನ್. ನಾಗರಾಜ್ ರವರು ಸೇರಿದಂತೆ ಸಮಾಜದ ಗಣ್ಯರು ಶರಣ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

