ಅಪ್ಪು ಅವರ ಜೀವನ ಪ್ರೀತಿ ನೆನೆದು ನಮಿಸಿದ ಸಿದ್ದರಾಮಯ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲಾ ಪ್ರತಿಭೆಯ ಜೊತೆಯಲ್ಲಿ ಸರಳತೆ, ಸಜ್ಜನಿಕೆ ಮತ್ತು ಸಮಾಜಮುಖಿ ಚಿಂತನೆಗಳಿಂದಾಗಿ ಎಳೆಯ ವಯಸ್ಸಿನಲ್ಲಿಯೇ ಎತ್ತರಕ್ಕೆ ಬೆಳೆದು ನಮ್ಮೆಲ್ಲರಲ್ಲಿ ಅಭಿಮಾನ ಮೂಡಿಸಿದ ಹುಡುಗ ಪುನೀತ್ ರಾಜ್‍ಕುಮಾರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುನೀತ್ ಬದುಕಿನ ಹಾದಿ ಚಿಕ್ಕದುಆದರೆ ಅಲ್ಪಾಯುಷ್ಯದಲ್ಲಿಯೇ ತನ್ನ ನಡೆ-ನುಡಿಯ ಮೂಲಕ ಆತ  ನೀಡಿರುವ ಜೀವನದ ಸಂದೇಶ ಸದಾ ಸ್ಮರಣೀಯ ಮತ್ತು ಸ್ಪೂರ್ತಿದಾಯಕ.

- Advertisement - 

ಪುನೀತ್ ಇಂದು ನಮ್ಮೆಲ್ಲರನ್ನು ರಂಜಿಸುತ್ತಾ, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ತುಂಬುತ್ತಾ ನಮ್ಮ ಜೊತೆ ಇರಬೇಕಿತ್ತು ಎಂದು ಲೆಕ್ಕವಿಲ್ಲದಷ್ಟು ಸಲ ಅನ್ನಿಸಿದೆ.

ಸಹಜ ಅಭಿನಯ, ಸನ್ನಡತೆಯಿಂದ ಕೋಟ್ಯಂತರ ಜನರ ಮನಗೆದ್ದ ಕನ್ನಡಿಗರ ಪ್ರೀತಿಯ ಅಪ್ಪುವಿನ‌‌ಜನ್ಮದಿನದಂದು ಅವರ ಜೀವನ ಪ್ರೀತಿಯನ್ನು ನೆನೆದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಿಸಿದರು.

- Advertisement - 

 

 

Share This Article
error: Content is protected !!
";