ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ  ಶ್ರೀ ಜಗದ್ಗುರು ರೇಣುಕಾಚಾರ್ಯ ಸ್ವಾಮಿಗಳ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

ತಾಲ್ಲೂಕು ಕಛೇರಿ ಅವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸ್ವಾಮಿಗಳ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಉಪ ತಹಶೀಲ್ದಾರ್ ರಾಧಾ, ಮಾತನಾಡಿ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಇವರ ತತ್ವ, ಬದುಕಿನ ಚರಿತ್ರೆ, ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ಕನ್ನಡ ಭಾಷೆಯಲ್ಲಿ ಇವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಪುರಾಣಗಳು ಇವೆ. ಜಗದ್ಗುರು ರೇಣುಕಾಚಾರ್ಯರು ಶಿವನ ಅವತಾರ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ. ಪೂಜಾರಾಧನೆ, ಮತ್ತು ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಮತ್ತು ಅವರ ತತ್ವಗಳನ್ನು ನಮ್ಮ ಯುವ ಸಮಾಜ ಪಾಲಿಸಿದರೆ ಉತ್ತಮ  ಸಮಾಜ ನಿರ್ಮಾಣ ಸಾಧ್ಯ ಎಂದರು.

- Advertisement - 

ಈ ಸಂದರ್ಭದಲ್ಲಿ  ವೀರಶೈವ ಮಹಾಸಭಾದ ಮುಖಂಡರುಗಳು, ಪಾಪಣ್ಣ, ಲೋಕೇಶ್ ನಾಗಸಂದ್ರ, ಮುತ್ತಣ್ಣ  ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜು.ಎಮ್. ತಾಲೂಕ ಅಧ್ಯಕ್ಷ ಶಶಿಧರ್ ಸಿ, ಕಾರ್ಯಾಧ್ಯಕ್ಷ ಮಹದೇವ್ತಾಲ್ಲೂಕು  ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

 

- Advertisement - 

 

Share This Article
error: Content is protected !!
";