ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ವಕೀಲರ ಸಂಘದ 2025 ರಿಂದ 2027ರ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಎಂ.ರೇಣುಕಾಮೂರ್ತಿ, ಉಪಾಧ್ಯಕ್ಷರಾಗಿ ಕೆ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಕನಕರಾಜ್, ಖಜಾಂಚಿಯಾಗಿ ಆರ್.ಗೀತಾ, ಸಹ ಕಾರ್ಯದರ್ಶಿಯಾಗಿ ಜಿ.ಸಿ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಕೆ. ಅಕ್ಷಯ್ ಕುಮಾರ್, ಅರುಣ್ ಕುಮಾರ್, ವಿ.ಕೆ.ಅಶೋಕ್, ಟಿ.ಎಂ.ಮಹೇಂದ್ರ ಪ್ರತಾಪ್, ಎ.ಎಸ್.ಸಂದೇಶ್ ಕುಮಾರ್, ಸಿ.ರಾಜು ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ದೇಶಕರಾಗಿ ಎಂ.ಎನ್ .ಗಾಯಿತ್ರಿ, ಎನ್.ಸಿ.ನೇತ್ರಾವತಿ, ಟಿ.ಭಾರತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಂ.ನರಸಿಂಹ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಲ್.ಸಂಜೀವಪ್ಪ ತಿಳಿಸಿದ್ದಾರೆ.

