ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರೆಡು ಅಪರಿಚಿತ ಶವ ಪತ್ತೆಯಾಗಿರುವ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲನೆ ಪ್ರಕರಣದಲ್ಲಿ ಅನಾರೋಗ್ಯ ನಿಮಿತ್ತ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ಆದರೆ ಅನಾಮಧೇಯ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ 03-08-2024 ರಂದು ರಾತ್ರಿ 10:30 ಗಂಟೆಗೆ ಜಿಲ್ಲಾ ಆಸ್ಪತೆಯಲ್ಲಿ ಮೃತಪಟ್ಟಿರುತ್ತಾರೆ. ಸುಮಾರು 5 ಅಡಿ 4 ಇಂಚು ಎತ್ತರ, ಕೋಲು ಮುಖ, ತೆಳ್ಳನೆಯ ಮೈಕಟ್ಟು, ಬಿಳಿ ಗಡ್ಡ, ಬೋಳು ತಲೆಯ ಅನಾಮಧೇಯ ವ್ಯಕ್ತಿ, ನೀಲ ಬಣ್ಣದ ಟೀಷರ್ಟ್, ಕಪ್ಪು ಬಣ್ಣದ ಬರ್ಮುಡ ಧರಿಸಿರುತ್ತಾರೆ.
ಎರೆಡನೇ ಪ್ರಕರಣದಲ್ಲಿ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ದಿನಾಂಕ 06-10-2024 ರಂದು ಸುಮಾರು 35 ವಯಸ್ಸಿನ ಅನಾಮಧೇಯ ವ್ಯಕ್ತಿ ಕುಡಿದು ಮೃತಪಟ್ಟಿರುತ್ತಾನೆ. ಸುಮಾರು 5 ಅಡಿ 5 ಇಂಚು ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕುರುಚುಲು ಗಡ್ಡ, ತಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಹಳದಿ ಷರ್ಟ್ ಮತ್ತು ಕೆಂಪು ಡ್ರಾಯರ್, ಹರಿದಿರುವ ನೀಲಿ ಜೀನ್ಸ್ ಪ್ಯಾಂಟ್ ಹಾಕಿರುತ್ತಾನೆ. ಕೊರಳಲ್ಲಿ ಆರ್ಟಿಫಿಷಿಯಲ್ ಚೈನ್ ಆಭರಣ ಧರಿಸಿರುತ್ತಾನೆ.
ಮೃತ ವ್ಯಕ್ತಿಗಳ ಗುರುತು ಪತ್ತೆಯಾದರೆ, ಚಳ್ಳಕೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08195-250239, 9480803159-3112, ಉಪಾಧೀಕ್ಷಕರವರ ಕಛೇರಿ ದೂರವಾಣಿ ಸಂಖ್ಯೆ 08195-251010-3121, ಜಿಲ್ಲಾ ನಿಸ್ತಂತು ಕೇಂದ್ರ ದೂರವಾಣಿ ಸಂಖ್ಯೆ 8194-222782ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.