ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಹಾಗೂ ಬಾಲೇನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಚಿತ್ರದುರ್ಗ ನಗರದ ಎಪಿಎಂಸಿ ಬಳಿ ರೈಲು ಗಾಡಿಗೆ ಸಿಲುಕಿ ಸು. 30-35ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಕುರಿತು ಬುಧವಾರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು ಸು.5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಶರೀರ, ಗೋಧಿ ಮೈ ಬಣ್ಣ, ತಲೆಯಲ್ಲಿ ಸು.2 ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಗಡ್ಡ ಮೀಸೆ ಹೊಂದಿದ್ದು, ಎಡಗೈಯಲ್ಲಿ ಊಂಖSಊA ಉ ಎಂಬ ಅಚ್ಚೆ ಗುರುತು ಇದೆ. ನೀಲಿ ಬಣ್ಣದ ಜರ್ಕಿನ್, ಬಿಳಿ ಬಣ್ಣದ ಸೀಮೆಂಟ್ ಪಟ್ಟಿಯ ರೆಡಿಮೇಡ್ ಅಂಗಿ, ನೀಲಿ ಬಣ್ಣದ ಪ್ಯಾಂಟ್, ಕಾಫಿ ಬಣ್ಣದ ಟೀ ಶರ್ಟ್ ಹಾಗೂ ಆರ್.ಕೆ.ಜಿ ಕಂಪನಿಯ ಅಂಡರ್ ವೇರ್ ಧರಿಸಿರುತ್ತಾರೆ.
ಈ ಮೇಲ್ಕಂಡ ಅಪರಿಚಿತ ವ್ಯಕ್ತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ 9480802123, ಇ-ಮೇಲ್: ಜಚಿvಚಿಟಿgeಡಿeಡಿಟಥಿ@ಞsಠಿ.gov.iಟಿ ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.