ಆರ್. ಎಲ್. ಜಾಪ್ಪನವರ ಪ್ರತಿಮೆ ಸ್ಥಾಪನೆಗೆ ನಗರಸಭೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಮಾಜಿ ಸಚಿವ ದಿವಂಗತ ಎಲ್.ಜಾಲಪ್ಪ ಅವರ ಪುತ್ಥಳಿ ಸ್ಥಾಪನೆ ಮಾಡಲು ಅವಕಾಶ ನೀಡುವಂತ. ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ತಾಲ್ಲೂಕಿನ ಅಹಿಂದ ಮುಖಂಡರುಗಳು ನಗರಸಭೆಯ ಪೌರಾಯುಕ್ತರು ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

 ನಂತರ  ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳ ಮಹದೇವ್ ಮಾತನಾಡಿ  ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರು. ಅಹಿಂದ ನಾಯಕರು, ಅಜಾತಶತ್ರು ಶ್ರೀ ಆರ್.ಎಲ್. ಚಾಲಪ್ಪನವರ ಸೇವೆ ತಾಲ್ಲೂಕಿಗೆ ಅಗಾಧವಾಗಿದೆ.

ತಾಲ್ಲೂಕಿನಲ್ಲಿ ಅಂದಿಗೆ, ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಿ ಹತ್ತಾರು ಸಾವಿರ ಜನರ ಬದುಕಿಗೆ ಆಸರೆಯಾದ ಧೀಮಂತ ನಾಯಕ ಹಾಗೂ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಜಕ್ಕಲಮಡಗು ಜಲಾಶಯದ ಮೂಲಕ ನಗರದ ಜನರ ನೀರಿನ ದಾಹ ತೀರಿಸಿದ ಭಗೀರಥ, ಇಂತಹ ಅಪರೂಪದ ಜನನಾಯಕ, ಹಿಂದುಳಿದ ವರ್ಗಗಳ ನೇತಾರರಾದ ಆರ್.ಎಲ್.ಜಾಲಪ್ಪ ಅವರ ಸೇವೆ ಅಭಿನಂದನೀಯ ಮತ್ತು ಅನುಕರಣೀಯ.

 ಅವರು ಶಾಸಕರಾಗಿ, ರಾಜ್ಯ ಸಚಿವರಾಗಿ, ಭಾರತ ಸರ್ಕಾರದ ಕೇಂದ್ರ ಸಚಿವರಾಗಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಅಪರೆಲ್ ಪಾರ್ಕ್ ವೃತ್ತಕ್ಕೆ ಈಗಾಗಲೇ ಆರ್.ಎಲ್.ಜಾಲಪ್ಪ ವೃತ್ತವೆಂದು ನಾಮಕರಣ ಮಾಡಿದ್ದಾರೆ.

ಈಗ ಆ ವೃತ್ತದಲ್ಲಿ ದಿವಂಗತ ಆರ್.ಎಲ್.ಜಾಲಪ್ಪನವರ ಪುತ್ಥಳಿ ಸ್ಥಾಪನೆ ಮಾಡಲು ಅನುಮತಿ ನೀಡಬೇಕೆಂದು ನಗರಸಭೆಯ ಪೌರಾಯುಕ್ತರಾದ ಕಾರ್ತಿಕೇಶ್ವರ್ ಹಾಗೂ ಅಧ್ಯಕ್ಷೆ ಸುಮಿತ್ರ ಆನಂದ್ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ದೊಡ್ಡಬಳ್ಳಾಪುರ ದಿಂದ ಬೆಂಗಳೂರು ಕಡೆ ಹೋಗುವ  ಬೆಂಗಳೂರು-ಹಿಂದೂಪುರ ರಸ್ತೆಯಲ್ಲಿರುವ ಆಪರೆಲ್ ಪಾರ್ಕ್ ವೃತ್ತಕ್ಕೆ ಈಗಾಗಲೇ ದಿವಂಗತ ಆರ್.ಎಲ್.ಜಾಲಪ್ಪ ವೃತ್ತ ವೆಂದು ನಾಮಕರಣ ಮಾಡುವಂತೆ ಅಹಿಂದ ಮುಖಂಡರಿಂದ ಒತ್ತಾಯವಿದೆ ಎಂದು ಡಾ.ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚೌಡರಾಜ್ ತಿಳಿಸಿದರು.

  ಈ ಸಂದರ್ಭದಲ್ಲಿ  ಬೌದ್ಧ ಸಮಾಜದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಳವ ನಾರಾಯಣ್,ಜೆ.ಮುನಿರಾಜು, ಜನಪರ ಮಂಜು ಮುನಿಸ್ವಾಮಿ ಹಾಜರಿದ್ದರು. 

- Advertisement -  - Advertisement - 
Share This Article
error: Content is protected !!
";