ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಹಾರ ಇಲಾಖೆಯಿಂದ ರದ್ದಾದ ಕಾರ್ಡ್‌ಗಳ ಮರುಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ರದ್ದಾಗಿದ್ದ ಕಾರ್ಡ್‌ಗಳ ಪೈಕಿ 2.95 ಲಕ್ಷ ಕಾರ್ಡ್‌ಗಳನ್ನು ಈಗಾಗಲೇ ಬಿಪಿಎಲ್‌ಗೆ ಮರುಸ್ಥಾಪಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಅರ್ಹರ ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವುದಿಲ್ಲ ಹಾಗೂ ಎಪಿಎಲ್‌ಗೆ ಬದಲಾಯಿಸುವುದಿಲ್ಲ ಎಂಬ ನಿಲುವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಭರವಸೆ ನೀಡಿದೆ.