ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ನಿವೃತ್ತ ಇಂಜಿನಿಯರ್, ತಾಲೂಕು ಪಂಚಾಯಿತಿ ಇಓ ಆಗಿದ್ದ ಕೆ.ಸಿ.ನಿಂಗಪ್ಪ(84) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏಪ್ರಿಲ್-14 ರಂದು ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರು, ಪತ್ನಿ, SJM ಕಾನೂನು ಕಾಲೇಜು ಪ್ರಾಚಾರ್ಯರಾಗಿದ್ದ ಕೆ.ಎನ್.ವಿಶ್ವನಾಥ್ ಸೇರಿದಂತೆ ಇಬ್ಬರು, ಪುತ್ರರು, ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ಕೆ.ಸಿ.ನಿಂಗಪ್ಪ, ಬಿಜಾಪುರದಲ್ಲಿ ಎಇಇ, ಚಿತ್ರದುರ್ಗ ನಗರಸಭೆ ಮುಖ್ಯಾಧಿಕಾರಿ, ಮೊಳಕಾಲ್ಮೂರು ತಾಲೂಕಿನಲ್ಲಿ ರಾಯದುರ್ಗ ಪ್ರಾಜೆಕ್ಟ್ ಇಂಜಿನಿಯರ್, ಭದ್ರಾವತಿ, ಹಿರಿಯೂರು ಮತ್ತಿತರೆಡೆಗಳಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಬುಧವಾರ ಅಂತ್ಯಕ್ರಿಯೆ ನಡೆಯಲಿದ್ದು, ಏ.14 ಸೋಮವಾರ ಸಂಜೆ 5 ಗಂಟೆಯಿಂದ ಹೊಸದುರ್ಗ ವಿದ್ಯಾನಗರದ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೊಸದುರ್ಗ ತಾಲೂಕು ಕುಂಚಿಟಿಗ ಸಮಾಜದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಕೆ.ಸಿ.ನಿಂಗಪ್ಪ ಅವರ ನಿಧನಕ್ಕೆ ಕುಂಚಿಟಿಗ ಸಮಾಜದಿಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುರುಘಾಮಠದಿಂದ ಸಂತಾಪ-
ನಗರದ ಎಸ್.ಜೆ.ಎಂ ಕಾನೂನು ಮಹಾವಿದ್ಯಾಲಯದ ಪ್ರೊ. ಕೆ.ಎನ್. ವಿಶ್ವನಾಥ್ ಅವರ ತಂದೆ ಕೆ.ಸಿ. ನಿಂಗಪ್ಪನವರ ನಿಧನಕ್ಕೆ ಮುರುಘಾ ಮಠವು ತೀವ್ರ ಸಂತಾಪ ಸೂಚಿಸಿದೆ.
ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಶಾಖಾಮಠವಾದ ಹೊಸದುರ್ಗ ಶ್ರೀ ಒಪ್ಪತ್ತಿನಸ್ವಾಮಿ ವಿರಕ್ತಮಠದ ಭಕ್ತರಾಗಿ, ಎರಡೂ ಮಠಗಳ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು.
ಮೃತರ ಅಗಲಿಕೆಯಿಂದ ಕುಟುಂಬ ವರ್ಗದವರಿಗೆ ಮತ್ತು ಹಿತೈಷಿಗಳಿಗೆ ಆಗಿರುವ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ಕರುಣಿಸಲಿ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಹಾಗೂ ಸದಸ್ಯರಾದ ಡಾ. ಪಿ.ಎಸ್. ಶಂಕರ್, ಡಾ. ಬಸವಕುಮಾರ ಸ್ವಾಮಿಗಳು, ಎನ್.ಎಸ್. ಚಂದ್ರಶೇಖರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಏ.16ರಂದು ಬುಧವಾರ ಅವರ ಸ್ವಗ್ರಾಮ ಕೆಂಕೆರೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.