ಸೇಡು ಮನುಷ್ಯತ್ವದ ಧರ್ಮವಲ್ಲ-ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಬದುಕಿನ ನೀತಿಯಲ್ಲಿ ಮನುಷ್ಯ ಮನುಷ್ಯರ ಅಂತರಿಕ ವಿಚಾರದಲ್ಲಿ ಕೆಲವೊಮ್ಮೆ ಮೋಸದ ಜೊತೆಗೆ ಕಷ್ಟಗಳು ಬಂದೊದಗುತ್ತವೆ. ಮನುಷ್ಯರಿಂದ ಬಂದೊದಗುವ  ಕಷ್ಟಗಳಿಗೆ ಎದೆಗುಂದದೇ ನೋವು ತಿನ್ನದೇ ಬಂದಿರುವ ಕಷ್ಟಗಳನ್ನು ಎದುರಿಸಬೇಕು.

ಅದಕ್ಕೇ ಬದಲಾಗಿ ಕೇಡು ಬಯಸುವ ವ್ಯಕ್ತಿತ್ವವನ್ನು ಕೆಟ್ಟದಾಗಿ ಬೈದುಕೋಳದೆ ಅವರ ವಿರುದ್ಧ  ಸೇಡು ತೀರಿಸಿಕೊಳ್ಳುವ ವ್ಯವಸ್ಥೆಗೆ ಹೋಗಬಾರದು.

 ಮನುಷ್ಯರಿಗೆ ಬಂದೊದಗುವ ಕಷ್ಟಗಳ ಸಮಯದಲ್ಲಿಯೇ ವಿಶ್ವಾಸದ ಪರಿಚಿತರು ಕಷ್ಟಗಳನ್ನು ನಿವಾರಿಸುವ ನೆಪದಲ್ಲಿ ಇನ್ನಷ್ಟು ಕಷ್ಟಗಳನ್ನು ಕೊಡಲು ಪ್ರಯತ್ನಿಸುತ್ತಾರೆ ಅಂತಹವರನ್ನು ದೂಷಿಸುವ ಬದಲು ಕರ್ಮಕ್ಕೆ ದೊಡ್ಡ ಅವಕಾಶ ನೀಡಬೇಕು ಇದು ಪಾರಂಪರಿಕ ಪರಂಪರೆ ವಿಚಾರ, ಇದು ಧರ್ಮ ಕರ್ಮಗಳ ಮೇಲಾಟದ ಅನುಭವದ ವಿಚಾರ.

ವೇದಾ ಸುಳ್ಳಾಗಬಹುದು ಪಾರಂಪರಿಕ ನೀತಿಯ ಸತ್ಯ ಎಂದೆಂದಿಗೂ ಸುಳ್ಳಾಗದು. ಇದು ಸತ್ಯದ ಸಂಗತಿ ಇದಕ್ಕೆ ಸಾಕ್ಷಿ ಗುಡ್ಡೆಗಳು ಹಲವಾರು.
ಕಿರು ಲೇಖನ-ರಘು ಗೌಡ, ಕೆಟಿ ಹಳ್ಳಿ.

- Advertisement -  - Advertisement - 
Share This Article
error: Content is protected !!
";