ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ವಿವಿಧ ಇಲಾಖೆಗಳಲ್ಲಿನ ಪದವಿ ಪೂರ್ವ ವಿದ್ಯಾರ್ಹತೆಯ ವಿವಿಧ ಗ್ರೂಪ್–ಸಿ (ಉ.ಮೂ.ವ್ಯ.) ಹುದ್ದೆಗಳ ನೇಮಕಾತಿ ಸಂಬಂಧ 2025 ರ ಮಾರ್ಚ್ 16 ರಂದು ನಡೆಸಲಾದ
ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ–1 ವಿಷಯ ಸಂಕೇತ–640 ಮತ್ತು ಪತ್ರಿಕೆ–2 ವಿಷಯ ಸಂಕೇತ– 641ರ ಪರಿಷ್ಕೃತ ಕೀ–ಉತ್ತರಗಳನ್ನು ಆಯೋಗದ ಜಾಲತಾಣ http://kpsc.kar.nic.in/KeyAnwer ನಲ್ಲಿ ಪ್ರಕಟಿಸಲಾಗಿದೆ.
ಪರಿಷ್ಕೃತ ಕೀ–ಉತ್ತರಗಳು ಪ್ರಕಟಿಸಿದ ನಂತರ, ಕೀ–ಉತ್ತರ ಹಾಗೂ ಪರಿಷ್ಕೃತ ಕೀ–ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

